ದುಡಿಮೆಯಿಲ್ಲದೇ ಕೂತಿದ್ದ ಜನರಿಗೆ ವಿದ್ಯುತ್ ಬಿಲ್ ಶಾಕ್! ಸರ್ಕಾರಕ್ಕೆ ಜನರ ಹಿಡಿಶಾಪ

ಮಂಗಳವಾರ, 12 ಮೇ 2020 (09:39 IST)
ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ಮೊದಲೇ ಜನರಿಗೆ ಆದಾಯವಿಲ್ಲದೇ ನಿತ್ಯದ ಜೀವನಕ್ಕೆ ಪರದಾಡುವಂತಾಗಿದೆ. ಅದರ ಮೇಲೆ ಇದೀಗ ಗ್ರಾಹಕರಿಗೆ ವಿದ್ಯುತ್ ನಿಗಮಗಳು ದುಬಾರಿ ಬಿಲ್ ನೀಡಿ ಶಾಕ್ ಕೊಟ್ಟಿದೆ.

 

ಲಾಕ್ ಡೌನ್ ನಿಂದಾಗಿ ಕಳೆದ ತಿಂಗಳು ವಿದ್ಯುತ್ ಬಿಲ್ ನೀಡಿರದ ಎಲ್ಲಾ ವಿದ್ಯುತ್ ನಿಗಮಗಳು ಈಗ ಇದ್ದಕ್ಕಿದ್ದಂತೆ ಸಾಮಾನ್ಯವಾಗಿ ನೀಡುವುದಕ್ಕಿಂತಲೂ ಹೆಚ್ಚು ಬಿಲ್ ನೀಡಿರುವುದು ಗ್ರಾಹಕರಿಗೆ ನಿಜಕ್ಕೂ ಬರೆ ಎಳೆದಂತಾಗಿದೆ. ಸಾಮಾನ್ಯ ಬಿಲ್ ಗಿಂತ 200 ರಿಂದ 300 ರೂ. ಕೆಲವರಿಗೆ ದುಪ್ಪಟ್ಟು ಬಿಲ್ ನೀಡಲಾಗಿದೆ.

ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯುತ್ ನಿಗಮಕ್ಕೂ, ಸರ್ಕಾರಕ್ಕೂ ಹಿಡಿಶಾಪ ಹಾಕುತ್ತಿದ್ದಾರೆ. ಆರ್ಥಿಕ ಹೊರೆ ತಪ್ಪಿಸಲು ಸರ್ಕಾರ ಈ ರೀತಿ ಅಡ್ಡ ದಾರಿ ಹಿಡಿದಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿದ್ಯುತ್ ನಿಗಮಗಳಿಗೆ ಕರೆ ಮಾಡಿ ಕೇಳಿದರೆ ಏನೋ ಲೋಪವಾಗಿದೆ ಸರಿಪಡಿಸುತ್ತೇವೆ ಎಂಬ ಸಮಜಾಯಿಷಿಯೂ ಬರುತ್ತಿದೆ. ಈ ಅವ್ಯವಸ್ಥೆಗಳನ್ನು ಸದ್ಯದಲ್ಲೇ ಸರಿಪಡಿಸದೇ ಇದ್ದರೆ ಮೊದಲೇ ಅತಂತ್ರವಾಗಿರುವ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ