ಭಾರತಕ್ಕೆ ಆಸರೆಯಾದ ಶಿಖರ್ ಧವನ್, ಕೆ.ಎಲ್. ರಾಹುಲ್: ತಿರುಗೇಟು ನೀಡಿದ ಶ್ರೀಲಂಕಾ

ಶನಿವಾರ, 12 ಆಗಸ್ಟ್ 2017 (18:11 IST)
ಕೊಲಂಬೋದಲ್ಲಿ ನಡೆಯುತ್ತಿರುವ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ಒದಗಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಶಿಖರ್ ಧವನ್ 123 ಎಸೆತಗಳಲ್ಲಿ 119 ರನ್ ಸಿಡಿಸಿ ಸಂಭ್ರಮಿಸಿದರು. ಧವನ್ ಉತ್ತಮ ಸಾಥ್ ನೀಡಿದ ಕೆ.ಎಲ್. ರಾಹುಲ್ 85 ರನ್ ಕಲೆ ಹಾಕಿದರು.

ಶಿಖರ್ ಧವನ್ ಮತ್ತು ರಾಹುಲ್ ಔಟಾದ ಬಳಿಕ ಮಧ್ಯಮ ಕ್ರಮಾಂಕ ಕೊಂಚ ವೈಫಲ್ಯ ಅನುಭವಿಸಿತು. ಪೂಜಾರ 8 ರನ್`ಗೆ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ 42 ಮತ್ತು ರಹಾನೆ 17 ರನ್`ಗೆ ಪೆವಿಲಿಯನ್ ಸೇರಿಕೊಂಡರು.  ಅಶ್ವಿನ್ ಸಹ 31 ರನ್`ಗಳಿಗೆ ಔಟಾಗಿದ್ದಾರೆ. 13 ವೃದ್ಧಿಮಾನ್ ಸಹಾ ಮತ್ತು 1 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯಾ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಳೆ ಭಾರತದ ಬಾಲಂಗೋಚಿಗಳು ಉತ್ತಮ ಬ್ಯಾಟಿಂಗ್ ಮಾಡಿದರೆ ಭಾರತ ಮತ್ತಷ್ಟು ಸ್ಕೋರ್ ಗುಡ್ಡೆ ಹಾಕಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ