2011 ವಿಶ್ವಕಪ್ ಗೆ ದಶಕದ ಸಂಭ್ರಮ: ನೆನಪು ಮೆಲುಕು ಹಾಕಿದ ಯುವಿ, ಸೆಹ್ವಾಗ್

ಶುಕ್ರವಾರ, 2 ಏಪ್ರಿಲ್ 2021 (09:58 IST)
ಮುಂಬೈ: 2011 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಇಂದಿಗೆ 10 ವರ್ಷವಾಗಿದೆ. ಈ ದಶಕದ ಸಂಭ್ರಮವನ್ನು ಅಂದಿನ ವಿಶ್ವವಿಜೇತ ತಂಡದ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಮೆಲುಕು ಹಾಕಿದ್ದಾರೆ.


ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದು 28 ವರ್ಷಗಳ ಬಳಿಕ ದ್ವಿತೀಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಅಂದು ಧೋನಿ ಅಂತಿಮ ಎಸೆತದಲ್ಲಿ ಲಾಂಗ್ ಆನ್ ಕಡೆಗೆ ಹೊಡೆದ ಹೆಲಿಕಾಪ್ಟರ್ ಶಾಟ್ ಸಿಕ್ಸರ್ ಇಂದಿಗೂ ಜನ ಮರೆತಿಲ್ಲ.

ಆ ಗೆಲುವಿನ ಸಂಭ್ರಮವನ್ನು ಹಳೆಯ ಫೋಟೋಗಳ ಮೂಲಕ ಆ ವಿಶ್ವಕಪ್ ಕೂಟದ ಹೀರೋ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಸಚಿನ್, ಗಂಭೀರ್ ಸೇರಿದಂತೆ ಕ್ರಿಕೆಟಿಗರು, ಅಭಿಮಾನಿಗಳು ಮೆಲುಕು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ