ದೋಷ ಸರಿಪಡಿಸಿಕೊಂಡು ಮೂರನೇ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್: ಸರ್ಫ್ರಾಜ್ ಅಹ್ಮದ್

ಶನಿವಾರ, 30 ಜುಲೈ 2016 (19:24 IST)
ಎರಡನೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ ಪಾಕಿಸ್ತಾನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸರ್ಫ್ರಾಜ್ ಅಹ್ಮದ್ ಹುಮ್ಮಸ್ಸಿನಲ್ಲಿದ್ದು, ತಮ್ಮ ತಂಡ ದೋಷಗಳನ್ನು ಸರಿಪಡಿಸಿಕೊಂಡು ಮೂರನೇ ಟೆಸ್ಟ್ ಪಂದ್ಯದಲ್ಲಿ ದೃಢವಾಗಿ ಕಮ್‌ಬ್ಯಾಕ್ ಆಗಲು ನಿರ್ಧರಿಸಿರುವುದಾಗಿ ತಿಳಿಸಿದರು.

 
ಪಾಕಿಸ್ತಾನವು ತನ್ನ ಮೊದಲ ಟೆಸ್ಟ್ ಸ್ಫೂರ್ತಿಯುತ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲವಾಗಿದ್ದನ್ನು ಅವರು ಒಪ್ಪಿಕೊಂಡರು. ಪಿಚ್ ನಮ್ಮ ಬೌಲರುಗಳಿಗೆ ಅನುಕೂಲವಾಗಿದ್ದರೂ ಲಾರ್ಡ್ಸ್‌ನಲ್ಲಿ ಬೌಲಿಂಗ್ ಮಾಡಿದ ರೀತಿ ಬೌಲ್ ಮಾಡಲು ನಮಗೆ ಸಾಧ್ಯವಾಗಲಿಲ್ಲ ಎಂದು ಸರ್ಫ್ರಾಜ್ ಹೇಳಿದರು.
 
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗಗಳಲ್ಲೂ ನಾವು ಕ್ಲಿಕ್ ಆಗಲು ವಿಫಲವಾದೆವು. ಲಾರ್ಡ್ಸ್‌ನಲ್ಲಿ ನಾವು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಚೆನ್ನಾಗಿ ಮಾಡಿದ್ದಕ್ಕಿಂತ ಇದು ಭಿನ್ನವಾಗಿತ್ತು. ಆದಾಗ್ಯೂ ನಾವು ಈ ಸಮಸ್ಯೆಗಳನ್ನು ನಿವಾರಿಸಿಕೊಂಡು 2-1ರಿಂದ ಸರಣಿಯಲ್ಲಿ ಮುನ್ನಡೆ ಗಳಿಸಲು ದೃಢ ಕಮ್‌ಬ್ಯಾಕ್ ಆಗುವುದಾಗಿ ತಿಳಿಸಿದರು. ಆತಿಥೇಯರ ವಿರುದ್ಧ ಬಿಗಿಹಿಡಿತ ಕಾಯ್ದುಕೊಳ್ಳಲು ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಮತ್ತು ಜೋಯಿ ರೂಟ್‌ ವಿಕೆಟ್‌ಗಳನ್ನು ಬೇಗನೇ ಕೀಳಬೇಕೆಂದು ಸರ್ಫ್ರಾಜ್  ಅಭಿಪ್ರಾಯಪಟ್ಟರು.

ಇದು ನಮ್ಮ ಮನಸ್ಸಿನಲ್ಲಿ ಪ್ರಧಾನವಾಗಿದೆ. ಇಬ್ಬರು ಮುಖ್ಯ ಬ್ಯಾಟ್ಸ್‌ಮನ್‌ಗಳನ್ನು ಕೀಳಲು ನಾವು ಯೋಜನೆ ರೂಪಿಸಿ ಉಳಿದ ಬ್ಯಾಟಿಂಗ್ ಲೈನ್‌ಅಪ್ ಮೇಲೆ ಒತ್ತಡ ಹೇರುವುದು ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ