ಮೊಯಿನ್ ಅಲಿ ಶತಕ, ಇಂಗ್ಲೆಂಡ್ 328 ರನ್‌ಗೆ ಆಲೌಟ್

ಶುಕ್ರವಾರ, 12 ಆಗಸ್ಟ್ 2016 (13:26 IST)
ಮೊಯಿನ್ ಅಲಿ ಅವರ ಶತಕದ ನೆರವಿನಿಂದ ಮತ್ತು ಪಾಕಿಸ್ತಾನ ಫೀಲ್ಡಿಂಗ್ ದೋಷಗಳಿಂದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಮೊದಲ ದಿನ 328 ರನ್‌ಗಳಿಗೆ ಆಲೌಟ್ ಆಗಿದೆ.
 
 ಪಾಕಿಸ್ತಾನ ದಿನದ ಕೊನೆಯಲ್ಲಿ ಮೂರು ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದು, ಅಜರ್ ಅಲಿ ಮತ್ತು ನೈಟ್‌ವಾಚ್‌ಮನ್ ಯಾಸಿರ್ ಶಾಹ್ ಇನ್ನೂ ಖಾತೆ ತೆಗೆದಿಲ್ಲ. ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುಂದಿದ್ದು, ವಿಶ್ವದ ಟಾಪ್ ಶ್ರೇಯಾಂಕದ ಟೆಸ್ಟ್ ತಂಡವಾಗುವ ಪ್ರಯತ್ನದಲ್ಲಿ 74ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ಮೊಯಿನ್ ಅಲಿ ಆಡಲಿಳಿದಾಗ ಅದು 110ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 
 
 ಮೊಯಿನ್ ಅಲಿ 5ನೇ ವಿಕೆಟ್‌ಗೆ ಜಾನ್ ಬೇರ್‌ಸ್ಟೋ(55) ಜತೆ 93 ರನ್ ಜತೆಯಾಟದೊಂದಿಗೆ ಆಟದ ದಿಕ್ಕನ್ನು ತಿರುಗಿಸಿದರು.
 ಆಫ್ ಸ್ಪಿನ್ನಿಂಗ್ ಆಲ್‌ರೌಂಡರ್ 86 ಎಸೆತಗಳಲ್ಲಿ ಕ್ರಿಸ್ ವೋಕ್ಸ್ ಜತೆ 79 ರನ್ ಸೇರಿಸಿದರು.  ಸೊಹೇಲ್ ಖಾನ್ 68 ರನ್ ನೀಡಿ 5 ವಿಕೆಟ್ ಕಬಳಿಸಿದರು. ಅವರ 13 ಎಸೆತಗಳಲ್ಲಿ 6 ರನ್ ನೀಡಿ 3 ವಿಕೆಟ್ ಕಬಳಿಕೆಯಿಂದ ಇಂಗ್ಲೆಂಡ್ 286ಕ್ಕೆ 9 ವಿಕೆಟ್ ಕಳೆದುಕೊಂಡಿತು. ಆ ಹಂತದಲ್ಲಿ ಅಲಿ ಶತಕಕ್ಕೆ ಇನ್ನೂ 11 ರನ್ ಕಡಿಮೆಯಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ