IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 16 ವರ್ಷಗಳ ಬಳಿಕ ಈ ದಾಖಲೆ ಬರೆದ ಆರ್‌ಸಿಬಿ

Sampriya

ಭಾನುವಾರ, 4 ಮೇ 2025 (11:10 IST)
Photo Courtesy X
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಚಕ ಹಣಾಹಣಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 2 ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು. ಈ ಮೂಲಕ ಆರ್‌ಸಿಬಿ ತಂಡವು ಚೆನ್ನೈ ವಿರುದ್ಧ 16 ವರ್ಷಗಳ ಬಳಿಕ ಹೊಸ ದಾಖಲೆ ನಿರ್ಮಿಸಿದೆ.

ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದೆ. ಜೊತೆಗೆ ಪ್ಲೇ ಆಫ್‌ ಹಾದಿ ಬಹುತೇಕ ಖಚಿತಪಡಿಸಿಕೊಂಡಿದೆ. ಇದರೊಂದಿಗೆ 16 ವರ್ಷಗಳ ಐಪಿಎಲ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸತತ 2 ಬಾರಿ ಗೆದ್ದ ದಾಖಲೆ ಬರೆದಿದೆ.

ಆರ್‌ಸಿಬಿ ನೀಡಿದ್ದ 214 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು 16 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, 17ನೇ ಓವರ್‌ನಲ್ಲಿ ಆಯುಷ್‌ ಮಾತ್ರೆ (94) ವಿಕೆಟ್‌ ಒಪ್ಪಿಸಿಸುತ್ತಿದ್ದಂತೆ ಪಂದ್ಯ ತಿರುವು ಪಡೆಯಿತು. ಕೊನೆಯ ಓವರ್‌ನಲ್ಲಿ ಯಶ್‌ ದಯಾಳ್‌ ಒಂದು ನೋಬಾಲ್‌ ಹಾಕಿದರೂ ಚೆನ್ನೈ ತಂಡಕ್ಕೆ ಗೆಲುವು ಒಲಿಯಲಿಲ್ಲ.

ಇದಕ್ಕೂ ಮುನ್ನ ಟಾಸ್ ಸೋತ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿತ್ತು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ ಮತ್ತು ಜಾಕೊಬ್ ಬೆಥೆಲ್ ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದರು. 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಐಪಿಎಲ್‌ನಲ್ಲಿ ಎರಡನೇ ಅತಿವೇಗದ ಅರ್ಧಶತಕವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ