ಹಡಗಿನ ನಾವಿಕ ಪಾಕ್ ತಂಡ ಸೇರಿ ಭಾರತಕ್ಕೆ ಮುಳುವಾದ..!

ಸೋಮವಾರ, 19 ಜೂನ್ 2017 (18:36 IST)
ಫಖಾರ್ ಜಮಾನ್.. ಎರಡು ದಿನಗಳ ಹಿಂದಷ್ಟೇ ಜಗತ್ತಿಗೆ ಪರಿಚಯವಿಲ್ಲದ ೀ ಹೆಸರು ನಿನ್ನೆಯಿಂದ ಭಾರೀ ಪ್ರಸಿದ್ಧವಾಗಿದೆ. ಹೌದು, ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ನೆರವಾದ ಬ್ಯಾಟ್ಸ್`ಮನ್ ಫಖಾರ್ ಜಮಾನ್.

ಅಂದಹಾಗೆ, ಈ ಫಖಾರ್ ಜಮಾನ್ ಪಾಕಿಸ್ತಾನ ಹಡಗಿನ ನಾವಿಕ. ಹೌದು, ಚಿಕ್ಕಂದಿನಿಂದಲೂ ಫಖಾರ್`ಗೆ ಕ್ರಿಕೆಟ್ ಆಡುವುದೆಂದರೆ ಪಂಚ ಪ್ರಾಣ. ಆದರೆ, ತಂದೆಗೆ ಮಗ ಬ್ಯಾಟ್ ಹಿಡಿಯುವುದು ಇಷ್ಟವಿರಲಿಲ್ಲ. ಮಗ ಯಾವುದಾದರೊಂದು ಉದ್ಯೋಗಕ್ಕೆ ಸೇರಿ ಜೀವನ ರೂಪಿಸಿಕೊಳ್ಳಲು ಎಂಬ ಆಸೆ ಇತ್ತು. 2007ರಲ್ಲಿ ನೌಕಾಪಡೆಯ ಹಡಗಿನ ನಾವಿಕನಾಗಿ ಫಖಾರ್`ಗೆ ಕೆಲಸ ಸಿಕ್ಕಿತ್ತು.

ನೌಕಾಪಡೆಯಲ್ಲಿದ್ದ ಕೋಚ್ ಅಜಂ ಖಾನ್ ಫಖಾರ್ ಪ್ರತಿಭೆಯನ್ನ ಗುರ್ತಿಸಿದರು. ಈತ ಹಡಗನ್ನ ಓಡಿಸುವುದಕ್ಕಿಂತ ಬ್ಯಾಟ್ ಹಿಡಿಯುವುದೇ ಸೂಕ್ತ ಎಂದು ಮುಖ್ಯ ಕಚೇರಿಗಳು ತಿಳಿಸಿದರು. ಅಂದಿನಿಂದ ಬದಲಾಯ್ತು ಫಖಾರ್ ಹಣೆಬರಹ. ಅಹಮ್ಮದ್ ಶಹಜಾದ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್`ಗೆ ಪಾದಾರ್ಫನೆ ಮಾಡಿದ ಫಖಾರ್ ಭಾರತದ ವಿರುದ್ಧ ಶತಕ ಸಿಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ