ಮೈದಾನದಲ್ಲಿ ಚೆಂಡು ತಲೆಗೆ ತಾಗಿ ಕುಸಿದುಬಿದ್ದ ಅಡಾಮ್ ವೋಗ್ಸ್

ಬುಧವಾರ, 4 ಮೇ 2016 (20:04 IST)
ಆಸ್ಟ್ರೇಲಿಯಾ ಬ್ಯಾಟ್ಸ್‌‍ಮನ್ ಅಡಾಮ್ ವೋಗ್ಸ್ ಭಾನುವಾರ ಮಿಡಲ್‌ಸೆಕ್ಸ್ ಪರ ಸ್ಥಳೀಯ ಪಂದ್ಯದಲ್ಲಿ ಆಡುವಾಗ ತಲೆಗೆ ಚೆಂಡು ಬಡಿದು ಕುಸಿದುಬಿದ್ದ ಘಟನೆ ಸಂಭವಿಸಿದೆ. ಸೌತಾಂಪ್ಟನ್ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಹ್ಯಾಂಪ್‌ಶೈರ್ ವಿರುದ್ಧ ಪಂದ್ಯದಲ್ಲಿ ಆಡುವಾಗ ಬದಲಿ ಫೀಲ್ಡರ್ ಆಲೀ ರೇನರ್ ಎಸೆದ ಚೆಂಡನ್ನು ವಿಕೆಟ್ ಕೀಪರ್ ಜಾನ್ ಸಿಂಪ್ಸನ್ ಮಿಸ್ ಮಾಡಿದ್ದರಿಂದ  ವೋಗ್ಸ್ ತಲೆಯ ಹಿಂಭಾಗಕ್ಕೆ ಬಡಿದು ಕೂಡಲೇ ಕುಸಿದು ನೆಲಕ್ಕೆ ಬಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.   ಈ ಅಪಘಾತವು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್‌ಗೆ ಬೌನ್ಸರ್ ತಲೆಗೆ ತಾಗಿ ಸಾವನ್ನಪ್ಪಿದ ಘಟನೆಯನ್ನು ನೆನಪಿಸಿದೆ.

ಕಳೆದ ಫೆಬ್ರವರಿಯಲ್ಲಿ ನಡೆದ ವೆಲ್ಲಿಂಗ್‌ಟನ್ ಟೆಸ್ಟ್‌ನಲ್ಲಿ  36 ವರ್ಷ ವಯಸ್ಸಿನ ವೋಗ್ಸ್ ಸರ್ ಡಾನ್ ಬ್ರಾಡ್‌ಮನ್ ಅವರ 99.96 ಸರಾಸರಿಯನ್ನು ಸಂಕ್ಷಿಪ್ತ ಸಮಯದವರೆಗೆ ದಾಟಿದ್ದರು. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ