ಡ್ರೆಸ್ಸಿಂಗ್ ರೂಂನಲ್ಲಿ ಕೂತು ರವಿಚಂದ್ರನ್ ಅಶ್ವಿನ್ ಕಣ್ಣೀರು: ಇಂದೇ ಬರುತ್ತಾ ಘೋಷಣೆ

Krishnaveni K

ಬುಧವಾರ, 18 ಡಿಸೆಂಬರ್ 2024 (10:52 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೂರನೇ ಟೆಸ್ಟ್ ಪಂದ್ಯ ಅಂತ್ಯವಾಗುವ ಹೊತ್ತಿಗೆ ಟೀಂ ಇಂಡಿಯಾ ಫ್ಯಾನ್ಸ್ ಮತ್ತೊಂದು ಬೇಸರದ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣ ರವಿಚಂದ್ರನ್ ಅಶ್ವಿನ್.

ಇಂದು ಡ್ರೆಸ್ಸಿಂಗ್ ರೂಂನಲ್ಲಿ ಅಶ್ವಿನ್ ಕಣ್ಣೀರು ಹಾಕುತ್ತಿದ್ದರೆ ವಿರಾಟ್ ಕೊಹ್ಲಿ ಪಕ್ಕವೇ ಕುಳಿತು ತಬ್ಬಿ ಸಮಾಧಾನ ಮಾಡುತ್ತಿದ್ದರು. ಇದನ್ನು ನೋಡುತ್ತಿದ್ದರೆ ಅವರು ಇಂದು ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಹಬ್ಬಿದೆ.

ಅಶ್ವಿನ್ ಕಣ್ಣೀರು ಒರೆಸುತ್ತಲೇ ಇದ್ದರೆ ಕೊಹ್ಲಿ ಅವರ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಮಾಡುತ್ತಿದ್ದರು. ಇದನ್ನು ದೂರದಿಂದಲೇ ಕೂತು ಕೋಚ್ ಗಂಭೀರ್ ವೀಕ್ಷಿಸುತ್ತಿದ್ದರು. ಈ ಪಂದ್ಯದಲ್ಲಿ ಅಶ್ವಿನ್ ಆಡಿಲ್ಲ. ಹೀಗಾಗಿ ಆಡದೆಯೇ ಭಾರತ ಕಂಡ ಶ್ರೇಷ್ಟ ಸ್ಪಿನ್ನರ್ ನಿವೃತ್ತಿಯಾಗಲಿದ್ದಾರೆ ಎಂಬುದು ಅಭಿಮಾನಿಗಳಿಗೂ ಬೇಸರ ತಂದಿದೆ.

ಅಶ್ವಿನ್ ಟೀಂ ಇಂಡಿಯಾ ಕಂಡ ಶ್ರೇಷ್ಠ ಸ್ಪಿನ್ನರ್. ಹಲವು ದಿಗ್ಗಜರ ಸಾಲಿನಲ್ಲಿ ಅವರು ನಿಲ್ಲುತ್ತಾರೆ. ಆದರೆ ವಿದೇಶೀ ನೆಲದಲ್ಲಿ  ಅವರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಇದಕ್ಕೆ ಅಲ್ಲಿನ ಪಿಚ್ ಕಂಡೀಷನ್ ಕೂಡಾ ಕಾರಣ ಎನ್ನಬಹುದು. ಈ ಸರಣಿಗೂ ಮೊದಲೇ ಇದು ಅವರ ಪಾಲಿನ ಕೊನೆಯ ಸರಣಿಯಾಗಲಿದೆ ಎಂದು ಬಿಸಿಸಿಐನಿಂದಲೇ ಸೂಚನೆ ಸಿಕ್ಕಿತ್ತು ಎನ್ನಲಾಗಿದೆ.

ಇದೀಗ 38 ವರ್ಷದ ಅಶ್ವಿನ್ 14 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ. 2010 ರಲ್ಲಿ ಅವರು ಏಕದಿನ ಪಂದ್ಯಕ್ಕೆ, 2011 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ