ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಅಜಿಂಕ್ಯಾ ರೆಹಾನೆ
ರೆಹಾನೆ ಮೊದಲ ಇನಿಂಗ್ಸ್ ನಲ್ಲಿ 89 ರನ್ ಸಿಡಿಸಿ ಭಾರತದ ಮಾನ ಕಾಪಾಡಿದ್ದರು. ಅವರ ತಾಳ್ಮೆಯ ಆಟದಿಂದ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದ ಪಾರಾಗಿತ್ತು.
ಆದರೆ ಅವರಿಗೆ ಕೈ ಬೆರಳಿಗೆ ಗಾಯವಾಗಿದ್ದು, ಈ ಬಗ್ಗೆ ಮೂರನೇ ದಿನದಂತ್ಯಕ್ಕೆ ಮಾತನಾಡಿರುವ ಅವರು ಬೆರಳು ನೋಯುತ್ತಿದೆ. ಹಾಗಿದ್ದರೂ ಬ್ಯಾಟಿಂಗ್ ಮಾಡಬಹುದು ಎನಿಸುತ್ತಿದೆ ಎಂದಿದ್ದಾರೆ. ಎರಡನೇ ಇನಿಂಗ್ಸ್ ನಲ್ಲೂ ಅವರು ಫಿಟ್ ಆಗಿ ಬ್ಯಾಟಿಂಗ್ ಮಾಡುವುದು ಭಾರತದ ಪಾಲಿಗೆ ಮುಖ್ಯವಾಗಿದೆ.