ಫಾಲೋ ಆನ್ ನಿಂದ ಪಾರು, ಸೋಲು ತಪ್ಪಿಸಿಕೊಳ್ಳಲು ಟೀಂ ಇಂಡಿಯಾಗೆ ಇದೊಂದೇ ದಾರಿ!
ನಿನ್ನೆ ಮೂರನೇ ದಿನದಂತ್ಯಕ್ಕೆ ಆಸೀಸ್ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 296 ರನ್ ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಈಗ ಆಸೀಸ್ ಗೆ ಒಟ್ಟಾರೆ ಮುನ್ನಡೆ 296 ರನ್ ಗಳಾಗಿವೆ. ಆಸೀಸ್ ಕನಿಷ್ಠ 400 ರನ್ ಗಳ ಗುರಿ ಇಟ್ಟುಕೊಳ್ಳಲಿದೆ.
ಹೀಗಾಗಿ ಇಂದು ಮೊದಲ ಅವಧಿಯಲ್ಲಿ ಬ್ಯಾಟ್ ಮಾಡಿದರೂ ಸಾಕಾಗಬಹುದು. ಇದರಿಂದ ಟೀಂ ಇಂಡಿಯಾಗೆ ಬರೋಬ್ಬರಿ ಒಂದೂವರೆ ದಿನ ಆಸೀಸ್ ಎದುರಿಸುವುದು ಸವಾಲಾಗಲಿದೆ. ಮೊದಲ ಇನಿಂಗ್ಸ್ ನಲ್ಲಿ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿತ್ತು. ಎರಡನೇ ಸರದಿಯಲ್ಲಿ ಅಗ್ರ ಕ್ರಮಾಂಕ ತಾಳ್ಮೆಯ ಆಟವಾಡಿ ಕ್ರೀಸ್ ಗಂಟಿಕೊಂಡರೆ ಮಾತ್ರ ಸೋಲು ತಪ್ಪಿಸಿಕೊಳ್ಳಬಹುದು. ಆದರೆ ಆಸೀಸ್ ವೇಗದ ಬೌಲಿಂಗ್ ವಿಭಾಗವನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಟೀಂ ಇಂಡಿಯಾ ಈಗ ಸೋಲಿನ ಭೀತಿಗೆ ಸಿಲುಕಿದೆ.