ಡಬ್ಲ್ಯುಟಿಸಿ ಫೈನಲ್: ತಂಡ ಸಂಕಷ್ಟದಲ್ಲಿದ್ದಾಗ ಕೊಹ್ಲಿ ಊಟ ಮಾಡಿದ್ದೇ ತಪ್ಪಾಯ್ತು!

ಶುಕ್ರವಾರ, 9 ಜೂನ್ 2023 (07:10 IST)
Photo Courtesy: Twitter
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸೀಸ್ ನೀಡಿದ 469 ರನ್ ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್ ನಲ್ಲಿ ಎರಡನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಸಂಕಷ್ಟದಲ್ಲಿದೆ.

ಭಾರತದ ಪ್ರಮುಖ ಬ್ಯಾಟಿಗರೆಲ್ಲಾ ಪೆವಿಲಿಯನ್ ಸೇರಿಕೊಂಡಿದ್ದು ಇದೀಗ 5 ರನ್ ಗಳಿಸಿರುವ ಕೆಎಸ್ ಭರತ್ ಹಾಗೂ 29 ರನ್ ಗಳಿಸಿರುವ ಅಜಿಂಕ್ಯಾ ರೆಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇನ್ನೂ 318 ರನ್ ಗಳ ಹಿನ್ನಡೆಯಲ್ಲಿದೆ. ಇದಕ್ಕೆ ಮೊದಲು ರೋಹಿತ್ 15, ಗಿಲ್ 13, ಪೂಜಾರ, ಕೊಹ್ಲಿ ತಲಾ 14, ರವೀಂದ್ರ ಜಡೇಜಾ 48 ರನ್ ಗಳಿಸಿ ಔಟಾದರು.

ತಂಡ ಈ ಮಟ್ಟಿಗೆ ಸಂಕಷ್ಟ ಸ್ಥಿತಿಯಲ್ಲಿರುವಾಗಲೂ ವಿರಾಟ್ ಕೊಹ್ಲಿ ಪೆವಿಲಿಯನ್ ನಲ್ಲಿ ಕುಳಿತು ಇತರ ಆಟಗಾರರೊಂದಿಗೆ ನಗು ನಗುತ್ತಾ ಊಟ ಮಾಡುತ್ತಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿಮಗೆ ತಂಡ ಸಂಕಷ್ಟದಲ್ಲಿರುವುದು ಲೆಕ್ಕವೇ ಇಲ್ಲವೇ? ಹೀಗೆ ಜೋಕ್ ಮಾಡುತ್ತಾ ಏನೂ ಆಗದವರಂತೆ ಹಾಯಾ ತಿಂಡಿ ತಿನ್ನುತ್ತೂ ಕೂರಲು ಹೇಗೆ ಸಾಧ‍್ಯ? ಎಂದು ಕೆಲವರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ