ಡಬ್ಲ್ಯುಟಿಸಿ ಫೈನಲ್: ಫಾಲೋ ಆನ್ ತಪ್ಪಿಸಲು ಟೀಂ ಇಂಡಿಯಾ ಹೆಣಗಾಟ, ರೆಹಾನೆ ಅರ್ಧಶತಕ

ಶುಕ್ರವಾರ, 9 ಜೂನ್ 2023 (16:18 IST)
Photo Courtesy: Twitter
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸಿದೆ. ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಫಾಲೋ ಆನ್ ತಪ್ಪಿಸಲು ಹೋರಾಟ ನಡೆಸುತ್ತಿದೆ.

ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ನಿನ್ನೆ ಅಜೇಯರಾಗುಳಿದಿದ್ದ ಕೆಎಸ್ ಭರತ್ ವಿಕೆಟ್ ಕಳೆದುಕೊಂಡಿದೆ. ಏಕಾಂಗಿ ಹೋರಾಟ ನಡೆಸುತ್ತಿರುವ ಅಜಿಂಕ್ಯಾ ರೆಹಾನೆ ಅರ್ಧಶತಕ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು 64 ರನ್ ಗಳಿಸಿದ್ದರೆ ಅವರಿಗೆ ಸಾಥ್ ನೀಡುತ್ತಿರುವ ಶ್ರಾದ್ಧೂಲ್ ಠಾಕೂರ್ 22 ರನ್ ಗಳಿಸಿದ್ದಾರೆ.

ಭಾರತ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ. ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 469 ರನ್ ಗಳಿಸಿತ್ತು. ಹೀಗಾಗಿ ಭಾರತಕ್ಕೆ ಫಾಲೋ ಆನ್ ತಪ್ಪಿಸಲು 270 ರನ್ ದಾಟಬೇಕಿದೆ. ಭಾರತ ಒಟ್ಟಾರೆ 251 ರನ್ ಗಳ ಹಿನ್ನಡೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ