ಫಾರ್ಮ್ ಕಂಡುಕೊಳ್ಳಲು ರಣಜಿ ಮೊರೆ ಹೋದ ರೆಹಾನೆ, ಪೂಜಾರ
ಇಬ್ಬರೂ ಕ್ರಿಕೆಟಿಗರು ಕಳೆದ ಸಾಕಷ್ಟು ಸಮಯದಿಂದ ರನ್ ಗಳಿಸಿಲ್ಲ. ಹೀಗಾಗಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಅವರೀಗ ತಂಡದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಇಂತಹ ಸಮಯದಲ್ಲಿ ರಣಜಿ ಇಬ್ಬರೂ ಕ್ರಿಕೆಟಿಗರಿಗೆ ಉತ್ತಮ ಅವಕಾಶವಾಗಿದ್ದು, ರೆಹಾನೆ ಮುಂಬೈ ಪರ ಪೃಥ್ವಿ ಶಾ ನೇತೃತ್ವದ ತಂಡದ ಪರ ರಣಜಿ ಆಡಲು ಹೊರಟಿದ್ದಾರೆ. ಇನ್ನು, ಪೂಜಾರ ಸೌರಾಷ್ಟ್ರ ಪರ ರಣಜಿ ಆಡಲು ಮುಂದಾಗಿದ್ದಾರೆ. ಫೆಬ್ರವರಿ 17 ರಿಂದ ರಣಜಿ ಟ್ರೋಫಿ ಕ್ರಿಕೆಟ್ ಆರಂಭವಾಗಲಿದೆ.