ಆಂಡರ್ಸನ್-ಸಿರಾಜ್ ಭುಜಕ್ಕೆ ಭುಜ ತಾಗಿಸಿ ಕಿತ್ತಾಟ

ಶನಿವಾರ, 7 ಆಗಸ್ಟ್ 2021 (09:52 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ನಡುವೆ ಕಿತ್ತಾಟ ನಡೆದಿದೆ.


ಬ್ಯಾಟಿಂಗ್ ಮಾಡುತ್ತಿದ್ದ ಸಿರಾಜ್ ಆಂಡರ್ಸನ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ್ದರು. ಆದರೆ ಬಾಲ್ ಬ್ಯಾಟ್ ಗೆ ತಾಗದೇ ಕೀಪರ್ ಕೈ ಸೇರಿತ್ತು. ಆಗ ಆಂಡರ್ಸನ್ ಸಿರಾಜ್ ರನ್ನು ಕಿಚಾಯಿಸಿದ್ದರು.

ಇದೇ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಇಬ್ಬರೂ ಬೇಕೆಂದೇ ಭುಜಕ್ಕೆ ಭುಜ ತಾಗಿಸಿ ಕಿತ್ತಾಟ ನಡೆಸಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ