ಸೂರ್ಯಕುಮಾರ್ ಯಾದವ್ ಮೇಲೆ ರೋಹಿತ್ ಶರ್ಮಾ ಪುತ್ರಿ ನಿಗಾ!

ಶನಿವಾರ, 7 ಆಗಸ್ಟ್ 2021 (09:39 IST)
ಲಂಡನ್: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಭಾಗವಾಗಲು ಇಂಗ್ಲೆಂಡ್ ಗೆ ತೆರಳಿದ್ದು, ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಸೂರ್ಯಕುಮಾರ್ ಎರಡು ದಿನಗಳ ಹಿಂದೆ ಪೃಥ್ವಿ ಶಾ ಜೊತೆಗೆ ಇಂಗ್ಲೆಂಡ್ ಬಂದಿಳಿದಿದ್ದಾರೆ. ಬಳಿಕ ಅಲ್ಲಿನ ನಿಯಮಗಳಂತೆ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಹೋಟೆಲ್ ಕೊಠಡಿಯೊಳಗೇ ಇತರ ಕ್ರಿಕೆಟಿಗರ ಸಂಪರ್ಕವಿಲ್ಲದೇ ಕಾಲ ಕಳೆಯುತ್ತಿದ್ದಾರೆ.

ಈ ವೇಳೆ ತಮ್ಮನ್ನು ಹೋಟೆಲ್ ಕೊಠಡಿಯ ಹೊರಗಿನಿಂದ ಮಾತನಾಡಿಸಿಕೊಂಡು ಬರಲು ರೋಹಿತ್ ಶರ್ಮಾ, ಪತ್ನಿ ರಿತಿಕಾ ಮತ್ತು ಪುತ್ರಿ ಸ್ಯಾಮಿ ಬಂದ ವಿಡಿಯೋವನ್ನು ಹಂಚಿಕೊಂಡಿರುವ ಸೂರ್ಯ, ನಾನು ಕ್ವಾರಂಟೈನ್ ಮಾಡುತ್ತಿದ್ದೇನೋ ಇಲ್ಲವೋ ಎಂದು ನೋಡಲು ಯಾರು ಬಂದಿದ್ದಾರೆ ನೋಡಿ ಎಂದು ತಮಾಷೆ ಮಾಡಿದ್ದಾರೆ. ಇನ್ನು, ಮುಂಬೈ ಇಂಡಿಯನ್ಸ್ ಪರ ಐಪಿಎಲ್ ನಲ್ಲಿ ರೋಹಿತ್ ಜೊತೆ ಆಡುವ ಕಾರಣಕ್ಕೆ ಸೂರ್ಯಕುಮಾರ್ ಯಾದವ್ ಎಂದರೆ ಪುಟಾಣಿ ಸ್ಯಾಮಿಗೆ ಅಚ್ಚುಮೆಚ್ಚು. ಈ ಕಾರಣಕ್ಕೆ ಸೂರ್ಯರನ್ನು ಹೋಟೆಲ್ ಹೊರಾಂಗಣದಲ್ಲಿ ದೂರದಿಂದಲೇ ಕೈ ಬೀಸಿ ಖುಷಿಪಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ