14 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಉತ್ತಮ ಆರಂಭ ಒದಗಿಸಿದ ರೋಹಿತ್-ರಾಹುಲ್

ಶುಕ್ರವಾರ, 6 ಆಗಸ್ಟ್ 2021 (09:10 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು.


ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್, ರೋಹಿತ್ ಶರ್ಮಾ ತಾಳ್ಮೆಯಿಂದ ಆಟ ಶುರು ಮಾಡಿ ಕ್ರೀಸ್ ಗಂಟಿಕೊಂಡ ಬಳಿಕ ದೊಡ್ಡ ಹೊಡೆತಕ್ಕೆ ಕೈ ಹಾಕಿದರು.

ಇವರಿಬ್ಬರೂ ಜೊತೆಯಾಗಿ 100 ಪ್ಲಸ್ ರನ್ ಜೊತೆಯಾಟವಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು. 14 ವರ್ಷಗಳ ಬಳಿಕ ಭಾರತಕ್ಕೆ ಏಷ್ಯಾ ಖಂಡದ ಹೊರಗಿನ ಮೈದಾನದಲ್ಲಿ ಉತ್ತಮ ಆರಂಭ ದೊರಕಿತು. 2007 ರಲ್ಲಿ ವಾಸಿಂ ಜಾಫರ್ (1243 ಬಾಲ್) ಮತ್ತು ದಿನೇಶ್ ಕಾರ್ತಿಕ್ (136 ಬಾಲ್) ತಲಾ 100 ಪ್ಲಸ್ ಎಸೆತ ಎದುರಿಸಿ ಉತ್ತಮ ಆರಂಭ ನೀಡಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರೂ ಓಪನರ್ ಗಳು 100 ಪ್ಲಸ್ ಎಸೆತ ಎದುರಿಸಿದರು. ಅಷ್ಟೇ ಅಲ್ಲದೆ, ರಾಹುಲ್ ಇಂಗ್ಲೆಂಡ್ ವಿರುದ್ಧವೇ ಮತ್ತೆ ಟೆಸ್ಟ್ ತಂಡಕ್ಕೆ ಮರಳಿ ಉತ್ತಮ ಫಾರ್ಮ್ ಪ್ರದರ್ಶಿಸಿರುವುದು ಗಮನಾರ್ಹ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ