ಇಂಗ್ಲೆಂಡ್ ಎದುರು ಕೆಎಲ್ ರಾಹುಲ್ ಬಂಡೆ, ಟೀಂ ಇಂಡಿಯಾಗೆ ಮುನ್ನಡೆ
ಶುಕ್ರವಾರ, 6 ಆಗಸ್ಟ್ 2021 (17:51 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವೂ ಟೀಂ ಇಂಡಿಯಾ ಕೆಎಲ್ ರಾಹುಲ್ ದಿಟ್ಟ ಹೋರಾಟ ಮುಂದುವರಿದಿದೆ.
ನಿನ್ನೆಯ ದಿನದಂತ್ಯಕ್ಕೆ ಅಜೇಯ 57 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಾಹುಲ್ ಇಂದೂ ಕೂಡಾ ಅದೇ ಫಾರ್ಮ್ ಮುಂದುವರಿಸಿದ್ದು, ಇತ್ತೀಚೆಗಿನ ವರದಿ ಬಂದಾಗ ಬರೋಬ್ಬರಿ 197 ಎಸೆತ ಎದುರಿಸಿ 72 ರನ್ ಗಳಿಸಿ ಆಡುತ್ತಿದ್ದಾರೆ. 24 ಗಳಿಸಿರುವ ರವೀಂದ್ರ ಜಡೇಜಾ ಅವರಿಗೆ ಸಾಥ್ ನೀಡುತ್ತಿದ್ದಾರೆ. ನಿನ್ನೆ ಅಜೇಯರಾಗಿದ್ದ ರಿಷಬ್ ಪಂತ್ 25 ರನ್ ಗೆ ವಿಕೆಟ್ ಒಪ್ಪಿಸಿದರು.
ಭಾರತ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದ್ದು, ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆಯತ್ತ ಸಾಗಿದೆ.