ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡ್ತಾರಾ, ಕ್ಯಾಪ್ಟನ್ ಗಿಲ್ ಹೇಳಿದ್ದೇನು

Krishnaveni K

ಬುಧವಾರ, 16 ಜುಲೈ 2025 (08:54 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಆಡ್ತಾರಾ ಎಂಬ ಪ್ರಶ್ನೆಗೆ ಕ್ಯಾಪ್ಟನ್ ಶುಭಮನ್ ಗಿಲ್ ಉತ್ತರಿಸಿದ್ದಾರೆ.

ಐದು ಟೆಸ್ಟ್ ಪಂದ್ಯಗಳ ಸರಣಿಗೆ ಬುಮ್ರಾ ಆಯ್ಕೆಯಾಗಿದ್ದರೂ ಎಲ್ಲಾ ಪಂದ್ಯಗಳನ್ನು ಆಡಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಪದೇ ಪದೇ ಗಾಯಗೊಳ್ಳುತ್ತಾರೆ. ಅವರಿಗೆ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಎಲ್ಲಾ ಪಂದ್ಯಗಳಲ್ಲಿ ಆಡದಂತೆ ವಿನಾಯ್ತಿ ನೀಡಲಾಗಿದೆ.

ಅದರಂತೆ ಮೊದಲ ಪಂದ್ಯ ಆಡಿದ್ದ ಬುಮ್ರಾ ಎರಡನೇ ಪಂದ್ಯವನ್ನು ಆಡಿರಲಿಲ್ಲ. ಆದರೂ ಅವರ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿದ್ದರು. ಆದರೆ ಮೂರನೇ ಪಂದ್ಯಕ್ಕೆ ಬುಮ್ರಾ ಕಮ್ ಬ್ಯಾಕ್ ಮಾಡಿದರೂ ತಂಡ ಗೆಲ್ಲಲಿಲ್ಲ.

ಇದೀಗ ನಾಲ್ಕನೇ ಪಂದ್ಯದಲ್ಲಿ ಆಡುತ್ತಾರೆಯೇ ಅಥವಾ ಮತ್ತೆ ವಿಶ್ರಾಂತಿ ಪಡೆಯಲಿದ್ದಾರೆಯೇ ಎಂಬ ಪ್ರಶ್ನೆಗೆ ಶುಭಮನ್ ಗಿಲ್ ಉತ್ತರಿಸಿದ್ದು, ಇದರ ಬಗ್ಗೆ ಸದ್ಯದಲ್ಲೇ ಗೊತ್ತಾಗಲಿದೆ ಎಂದಿದ್ದಾರೆ. ಮೂರನೇ ಪಂದ್ಯದಿಂದ ನಾಲ್ಕನೇ ಪಂದ್ಯಕ್ಕೆ ಒಂದು ವಾರದ ಬ್ರೇಕ್ ಇದೆ. ಹೀಗಾಗಿ ಬುಮ್ರಾ ಆಡಿದರೂ ಅಚ್ಚರಿಯಿಲ್ಲ. ಒಂದು ವೇಳೆ ಆಡದೇ ಇದ್ದರೂ ಅವರ ಅನುಪಸ್ಥಿತಿ ಕಾಡದಂತೆ ಇತರೆ ಬೌಲರ್ ಗಳು ಪ್ರದರ್ಶನ ನೀಡಬಹುದು ಎಂಬ ವಿಶ್ವಾಸ ಮ್ಯಾನೇಜ್ ಮೆಂಟ್ ಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ