ಡೋಪಿಂಗ್ ಉಲ್ಲಂಘನೆ: ಆಂಡ್ರೆ ರಸೆಲ್‌ಗೆ ಶಿಸ್ತು ಸಮಿತಿಯ ವಿಚಾರಣೆ

ಶುಕ್ರವಾರ, 15 ಜುಲೈ 2016 (13:09 IST)
12 ತಿಂಗಳ ಅವಧಿಯಲ್ಲಿ ಮೂರು ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ಮಿಸ್ ಮಾಡಿಕೊಂಡು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘಿಸಿದ ವೆಸ್ಟ್ ಇಂಡೀಸ್ ಆಲ್‌‍ರೌಂಡರ್ ಆಂಡ್ರೆ ರಸೆಲ್ ಅವರು ಸ್ವತಂತ್ರ ಶಿಸ್ತು ಸಮಿತಿಯ ಎದುರು ಆರಂಭಿಕ ವಿಚಾರಣೆಯನ್ನು ಬುಧವಾರ ಎದುರಿಸಲಿದ್ದಾರೆ.
 
ರಸೆಲ್  ಅವರು ಮೂರು ಡೋಪ್ ಟೆಸ್ಟ್ ಮಿಸ್ ಮಾಡಿಕೊಂಡು ತಪ್ಪಿತಸ್ಥರಾಗಿದ್ದು,  ಉದ್ದೀಪನಾ ಮದ್ದು ಸೇವನೆ ಕಾನೂನಿನ ಪ್ರಕಾರ, ವಿಫಲಗೊಂಡ ಡ್ರಗ್ ಟೆಸ್ಟ್‌ಗೆ ಸಮನಾಗಿದೆ. ರಸೆಲ್ ಪ್ರಕರಣವನ್ನು ವಿಚಾರಣೆ ನಡೆಸಲು ಜ್ಯಾಡ್ಕೊ ಸಮಿತಿಯೊಂದನ್ನು ನೇಮಿಸಿದೆ. ರಸೆಲ್ ಉಲ್ಲಂಘನೆ ಕುರಿತು ನಾವು ಎರಡು ವಾರಗಳ ಹಿಂದೆ ಮಾಹಿತಿ ಪಡೆದಿದ್ದು, ಅವರ ಪ್ರಕರಣ ವಿಚಾರಣೆಗೆ ಸಮಿತಿ ನೇಮಿಸಿರುವುದಾಗಿ ಜ್ಯಾಡ್ಕೊ ಅಧ್ಯಕ್ಷ ಕೆಂಟ್ ಪ್ಯಾಂಟ್ರಿ ತಿಳಿಸಿದರು.
 
ಕ್ಯಾರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಾಲಾವಾಹಾಸ್ ಪರ ಪ್ರಸಕ್ತ ಆಡುತ್ತಿರುವ ರಸೆಲ್ ತಪ್ಪಿತಸ್ಥರೆಂದು ಸಾಬೀತಾದರೆ ಎರಡು ವರ್ಷಗಳ ನಿಷೇಧ ಎದುರಿಸಲಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ