Rohit Sharma: ಸದ್ದು ಗದ್ದಲವಿಲ್ಲದೇ ರೋಹಿತ್ ಶರ್ಮಾ ನಿವೃತ್ತಿಯಾಗಿದ್ದರ ಹಿಂದಿದೆ ಕಾರಣ
ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಯಶಸ್ಸು ಕಂಡಿಲ್ಲ. ಸ್ವತಃ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ಫಾರ್ಮ್ ನಲ್ಲಿಲ್ಲ. ಹೀಗಾಗಿಯೇ ಅವರು ನಿವೃತ್ತಿಯಾಗಬೇಕು ಎಂದು ಒತ್ತಡವಿತ್ತು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಳಪೆ ಫಾರ್ಮ್ ನಿಂದಾಗಿ ಸ್ವತಃ ತಾವೇ ಪಂದ್ಯದಿಂದ ಹೊರಗುಳಿದಿದ್ದು ಇದಕ್ಕೆ ಸಾಕ್ಷಿ. ಇದರ ನಡುವೆ ಟೀಂ ಇಂಡಿಯಾದಲ್ಲಿ ಹೊಸ ನಾಯಕನನ್ನು ನೇಮಕ ಮಾಡಲು ತೆರೆಮರೆಯಲ್ಲೇ ಸಿದ್ಧತೆ ನಡೆದಿತ್ತು.
ಇದಕ್ಕಾಗಿಯೇ ರೋಹಿತ್ ಶರ್ಮಾ ಅವಮಾನ ಅನುಭವಿಸುವ ಬದಲು ತಾವಾಗಿಯೇ ನಾಯಕತ್ವ ಬಿಟ್ಟುಕೊಡಲು ಮುಂದಾದರು ಎನ್ನಲಾಗುತ್ತಿದೆ. ಇದೀಗ ಟೀಂ ಇಂಡಿಯಾಗೆ ಹೊಸ ಸಾರಥಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.