IPL 2025 RCB: 12 ವರ್ಷದ ಬಳಿಕ ಆರ್ ಸಿಬಿಗೆ ಬಂದ ಅಪ್ಪಟ ಕನ್ನಡಿಗ ಆಟಗಾರ

Krishnaveni K

ಗುರುವಾರ, 8 ಮೇ 2025 (10:36 IST)
Photo Credit: X
ಬೆಂಗಳೂರು: ಐಪಿಎಲ್ 2025 ರಲ್ಲಿ ಆರ್ ಸಿಬಿ ತಂಡದ ದೇವದತ್ತ್ ಪಡಿಕ್ಕಲ್ ಗಾಯದಿಂದಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಅಪ್ಪಟ ಕನ್ನಡಿಗ ಆಟಗಾರ ಬರೋಬ್ಬರಿ 12 ವರ್ಷಗಳ ಬಳಿಕ ಆರ್ ಸಿಬಿಗೆ ಬಂದಿದ್ದಾರೆ.

ಕನ್ನಡಿಗ ಆಟಗಾರ ದೇವದತ್ತ್ ಪಡಿಕ್ಕಲ್ ಜಾಗಕ್ಕೆ ಕನ್ನಡಿಗರೇ ಆದ ಮಯಾಂಕ್ ಅಗರ್ವಾಲ್ ಬಂದಿದ್ದಾರೆ. 2011 ರಲ್ಲಿ ಮಯಾಂಕ್ ಮೊದಲ ಬಾರಿಗೆ ಐಪಿಎಲ್ ಆಡಿದ್ದು ಆರ್ ಸಿಬಿ ಪರ. ಇದಾದ ಬಳಿಕ ಅವರು ಒಟ್ಟು ಮೂರು ಸೀಸನ್ ಆರ್ ಸಿಬಿ ಪರ ಆಡಿದ್ದರು.

2013 ರಲ್ಲಿ ಅವರು ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇದಾದ ಬಳಿಕ ಮಯಾಂಕ್ ಪುಣೆ, ಪಂಜಾಬ್ ಕಿಂಗ್ಸ್  ಪರ ಐಪಿಎಲ್ ಆಡಿದ್ದರು. ಕಳೆದ ಸೀಸನ್ ವರೆಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಅವರನ್ನು ಖರೀದಿಸಿರಲಿಲ್ಲ.

ಆದರೆ ಈಗ ಗಾಯಗೊಂಡಿರುವ ದೇವದತ್ತ್ ಪಡಿಕ್ಕಲ್ ಸ್ಥಾನಕ್ಕೆ ಆರ್ ಸಿಬಿ ಮಯಾಂಕ್ ಅಗರ್ವಾಲ್ ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದೂ ಬರೋಬ್ಬರಿ 12 ವರ್ಷಗಳ ಬಳಿಕ ಕನ್ನಡಿಗ ಆಟಗಾರನ ರಿ ಎಂಟ್ರಿ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ