ಕುಂಬ್ಳೆಯಿಂದ ಬಡ್ಡಿ ಕಾರ್ಯಕ್ರಮ, ಡ್ರಮ್ ಸೆಷನ್ ಬಳಿಕ ದಂಡದ ಸಮಿತಿ

ಸೋಮವಾರ, 18 ಜುಲೈ 2016 (16:45 IST)
ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆದಾಗಿನಿಂದ ಅನಿಲ್ ಕುಂಬ್ಳೆ ಕೋಚಿಂಗ್‌ನ ನವೀನ ಶೈಲಿಗೆ ಹೆಸರಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುಂಚೆ ಬಡ್ಡಿ ಕಾರ್ಯಕ್ರಮವನ್ನು ಕುಂಬ್ಳೆ ಮರುಪರಿಚಯಿಸಿದ್ದರು. ಮಾಜಿ ಭಾರತದ ಕೋಚ್ ಜಾನ್ ರೈಟ್ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರಲ್ಲಿ ಇಬ್ಬರು ಆಟಗಾರರ ಜೋಡಿಯಿರುತ್ತದೆ.
 
ಇದಾದ ಬಳಿಕ ಟೆಸ್ಟ್ ಕ್ರಿಕೆಟ್ ತಂಡವು ಸೀಮಿತ ಓವರುಗಳ ನಾಯಕ ಧೋನಿ ಜತೆ ಡ್ರಮ್ ಸೆಷನ್ ಮೋಜನ್ನು ಅನುಭವಿಸಿದರು. ಈಗ ಕುಂಬ್ಳೆ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ದಂಡ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಅದರಲ್ಲಿ ಚೇತೇಶ್ವರ್ ಪೂಜಾರ್ ಮತ್ತು ಶಿಖರ್ ಧವನ್ ಕೂಡ ಸಮಿತಿ ಸದಸ್ಯರಾಗಿದ್ದಾರೆ.
 
ಆಟಗಾರರು ಸಮಯಪಾಲನೆಗೆ ಗಮನಹರಿಸುವುದಕ್ಕಾಗಿ ಕುಂಬ್ಳೆ ಟೀಂ ಬಸ್ ತಡವಾಗಿ ಏರುವ ಆಟಗಾರರಿಗೆ 50 ಡಾಲರ್ ದಂಡ ವಿಧಿಸುವುದಾಗಿ ಕುಂಬ್ಳೆ ಈ ಮುಂಚೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಂಡ ಸಮಿತಿಯನ್ನು ಕುಂಬ್ಳೆ ನೇಮಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ