ಮಗಳ ಫೋಟೋ ತೆಗೆಯಲು ಬಂದ ಫೋಟೋಗ್ರಾಫರ್ ಮೇಲೆ ಸಿಟ್ಟಾದ ಅನುಷ್ಕಾ ಶರ್ಮಾ
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಪತಿ ವಿರಾಟ್, ಮಗಳೊಂದಿಗೆ ಬಂದಿಳಿದಾಗ ಅನುಷ್ಕಾ ವಮಿಕಾ ಫೋಟೋ ತೆಗೆಯಲು ಮುಂದಾದ ಫೋಟೋಗ್ರಾಫರ್ ಗಳ ಮೇಲೆ ಸಿಟ್ಟಾದ ಘಟನೆ ನಡೆದಿದೆ.
ಫೋಟೋಗ್ರಾಫರ್ ಗಳು ನಾವು ವಮಿಕಾ ಫೋಟೋ ತೆಗೆಯಲ್ಲ ಎಂದು ಭರವಸೆ ನೀಡಿದರೂ ಅನುಷ್ಕಾ ನಂಬಲಿಲ್ಲ. ಕೊನೆಗೆ ವಿರಾಟ್ ಫೋಟೋಗ್ರಾಫರ್ ಗಳ ಕ್ಯಾಮರಾ ಪರಿಶೀಲಿಸಿ ವಮಿಕಾ ಇಲ್ಲವೆಂದು ಖಚಿತಪಡಿಸಿಕೊಂಡ ನಂತರವೇ ಪೋಸ್ ನೀಡಿದ್ದಾರೆ.
-Edited by Rajesh Patil