ಇದೀಗ ಸಂದರ್ಶನವೊಂದರಲ್ಲಿ ಅನುಷ್ಕಾ ತಮ್ಮ ಲಂಡನ್ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು, ನನ್ನ ಗಂಡ ವಿರಾಟ್ ಇಬ್ಬರೂ ಮಕ್ಕಳ ಊಟವನ್ನು ನಾವೇ ತಯಾರಿ ಮಾಡ್ತೇವೆ. ನಮ್ಮ ಅಮ್ಮನಿಂದ ಕಲಿತ ಕೆಲವೊಂದು ಅಡುಗೆಗಳನ್ನು ಈಗ ಮಕ್ಕಳಿಗೆ ಮಾಡಿಕೊಡ್ತೇವೆ. ನಮ್ಮ ಅಮ್ಮನಿಂದ ಕಲಿತಿದ್ದು ಮಕ್ಕಳಿಗೂ ನೀಡಬೇಕು ಎನ್ನುವುದು ನಮ್ಮ ಆಸೆ. ಕೆಲವೊಮ್ಮೆ ಕೆಲವೊಂದು ರೆಸಿಪಿಗಳಿಗೆ ಅಮ್ಮನಿಗೆ ಕರೆ ಮಾಡುವುದು ಇದೆ. ಆದರೆ ನಮ್ಮ ಮಕ್ಕಳ ಅಡುಗೆ ನಾವೇ ತಯಾರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ನಮ್ಮ ದಿನಚರಿ ಬಗ್ಗೆ ನಾನು ತುಂಬಾ ಗಮನಹರಿಸುತ್ತೇನೆ. ನಾವು ತುಂಬಾ ಪ್ರವಾಸ ಮಾಡುತ್ತೇವೆ. ಆದರೆ ಯಾವತ್ತೂ ನಮ್ಮ ಊಟದ ಸಮಯ, ತಿಂಡಿ ಸಮಯವನ್ನು ಮಕ್ಕಳಿಗೆ ಫಿಕ್ಸ್ ಮಾಡಿದ್ದೇವೆ. ಎಲ್ಲೇ ಇದ್ದರೂ ನಮ್ಮ ಮಕ್ಕಳ ಊಟ ತಿಂಡಿಯ ಸಮಯ ತಪ್ಪಿಸುವುದಿಲ್ಲ. ನಿಗದಿತ ಸಮಯಕ್ಕೇ ಮಲಗುತ್ತೇವೆ. ಇದು ಅವರನ್ನು ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನುಷ್ಕಾ ಹೇಳಿದ್ದಾರೆ.