ದ್ವಿತೀಯ ಟಿ20 ಗೂ ಮೊದಲು ಸಂಕಷ್ಟದಲ್ಲಿ ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್

ಭಾನುವಾರ, 6 ಡಿಸೆಂಬರ್ 2020 (09:22 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯಾ ನಾಯಕ ಏರಾನ್ ಫಿಂಚ್ ಗಾಯದ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

ಮೊದಲ ಟಿ20 ಪಂದ್ಯದಲ್ಲಿ ಫಿಂಚ್ ಗಾಯಕ್ಕೊಳಗಾಗಿದ್ದು, ಸ್ಕ್ಯಾನಿಂಗ್ ಗೊಳಗಾಗಿದ್ದಾರೆ. ಒಂದು ವೇಳೆ ಸ್ಕ್ಯಾನಿಂಗ್ ವರದಿಯಲ್ಲಿ ಅವರ ಗಾಯ ಗಂಭೀರವಾಗಿದೆ ಎಂದಾದರೆ ಅವರು ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಈಗಾಗಲೇ ಫಿಂಚ್ ಸ್ಥಾನಕ್ಕೆ ನಥನ್ ಲಿಯಾನ್ ರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ಮೊದಲ ಟಿ20 ಸೋತಿರುವ ಆಸೀಸ್ ಸರಣಿ ಜೀವಂತವಾಗಿಡಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ