ಜಡೇಜಾ ಬದಲಿಗೆ ಚಾಹಲ್ ಆಡಿಸಿದ್ದು ಸರಿಯೋ ತಪ್ಪೋ? ವಿವಾದದ ಬಗ್ಗೆ ಗವಾಸ್ಕರ್ ಅಭಿಪ್ರಾಯ

ಶನಿವಾರ, 5 ಡಿಸೆಂಬರ್ 2020 (10:42 IST)
ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡ ಆಲರೌಂಡರ್ ರವೀಂದ್ರ ಜಡೇಜಾ ಬದಲಿಗೆ ಯಜುವೇಂದ್ರ ಚಾಹಲ್ ರನ್ನು ಬೌಲಿಂಗ್ ಮಾಡಲು ಕಣಕ್ಕಿಳಿಸಿದ್ದು ಸರಿಯೋ ತಪ್ಪೋ ಎನ್ನುವ ವಿವಾದದ ಬಗ್ಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.


ಆಲ್ ರೌಂಡರ್ ಆಗಿರುವ ಜಡೇಜಾ ಬದಲಿಯಾಗಿ ಕೇವಲ ಬೌಲರ್ ಆಗಿರುವ ಚಾಹಲ್ ರನ್ನು ಆಡಿಸಿದ್ದು ತಪ್ಪು ಎಂದು ಆಸೀಸ್ ಆಕ್ಷೇಪವೆತ್ತಿದೆ. ಆದರೆ ಈ ರೀತಿ ಬದಲಿ ಆಟಗಾರನಾಗಿ ಚಾಹಲ್ ರನ್ನು ಆಯ್ಕೆ ಮಾಡಲು ಸ್ವತಃ ಆಸ್ಟ್ರೇಲಿಯಾ ಮೂಲದ ಮ್ಯಾಚ್ ರೆಫರಿಯೇ ಒಪ್ಪಿಗೆ ನೀಡಿದ್ದಾರೆ ಎಂದು ಗವಾಸ್ಕರ್ ತಿರುಗೇಟು ನೀಡಿದ್ದಾರೆ. ಆದರೆ ಭಾರತದ ಮತ್ತೊಬ್ಬ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ನಾವು ನಿಯಮಾವಳಿಗಳ ಹುಳುಕುಗಳ ಲಾಭ ಪಡೆಯುವಲ್ಲಿ ಸದಾ ಎತ್ತಿದ ಕೈ ಎಂದು ಭಾರತವನ್ನೇ ದೂರಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಅದೇನೇ ಇರಲಿ, ಈ ವಿಚಾರವೀಗ ದೊಡ್ಡ ಮಟ್ಟದಲ್ಲಿ ವಿವಾದವಾಗುವ ಲಕ್ಷಣ ಕಾಣುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ