ಅಸಲಿಗೆ ಚಾಹಲ್ ಮೊದಲು ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಬ್ಯಾಟಿಂಗ್ ವೇಳೆ ಜಡೇಜಾ ಗಾಯಗೊಂಡ ಕಾರಣ ಐಸಿಸಿಯ ನೂತನ ನಿಯಮದ ಪ್ರಕಾರ ಸಬ್ ಆಟಗಾರನಾಗಿ ಚಾಹಲ್ ಫೀಲ್ಡಿಂಗ್ ವೇಳೆ ಕಣಕ್ಕಿಳಿದರು. ಈ ವೇಳೆ ಬೌಲಿಂಗ್ ಮಾಡಿದ ಚಾಹಲ್ ಎದುರಾಳಿಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಅವರ ಈ ಕಮಾಲ್ ಬೌಲಿಂಗ್ ನೋಡಿ ನೆಟ್ಟಿಗರು ರವೀಂದ್ರ ಜಡೇಜಾಗೆ ಪ್ರಿಪೇರ್ ಆಗಿದ್ದ ಆಸ್ಟ್ರೇಲಿಯನ್ನರಿಗೆ ಚಾಹಲ್ ಔಟ್ ಆಫ್ ಸಿಲಬಸ್ ಕ್ವೆಶ್ಚನ್ ಆದರು ಎಂದು ತಮಾಷೆ ಮಾಡಿದ್ದಾರೆ.