ಏಷ್ಯಾ ಕಪ್ ಕ್ರಿಕೆಟ್: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ?
ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವುದು ಬಹುತೇಕ ಖಚಿತ. ಕಳೆದ ಪಂದ್ಯದಲ್ಲಿ ಜ್ವರದಿಂದಾಗಿ ಹೊರಗುಳಿದಿದ್ದ ಆವೇಶ್ ಖಾನ್ ತಂಡಕ್ಕೆ ಮರಳಲಿದ್ದಾರೆ. ಹೀಗಾದಲ್ಲಿ ದೀಪಕ್ ಹೂಡಾ ಹೊರಹೋಗಲಿದ್ದಾರೆ. ರಿಷಬ್ ಪಂತ್ ಕಳೆದ ಪಂದ್ಯದಲ್ಲಿ ಬೇಜವಾಬ್ಧಾರಿ ಆಟದ ಮೂಲಕ ನಾಯಕ ರೋಹಿತ್ ಅಸಮಾಧಾನಕ್ಕೆ ಗುರಿಯಾಗಿದ್ದರು. ಹೀಗಾಗಿ ಮತ್ತೆ ದಿನೇಶ್ ಕಾರ್ತಿಕ್ ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.
ತಂಡದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಇದ್ದಾರೆ. ಯಜುವೇಂದ್ರ ಚಾಹಲ್ ಸ್ಥಾನಕ್ಕೆ ಇಬ್ಬರಲ್ಲಿ ಒಬ್ಬರು ತಂಡಕ್ಕೆ ಬರುವ ಸಾಧ‍್ಯತೆ ಇಲ್ಲದಿಲ್ಲ. ಉಳಿದಂತೆ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ.