ಮುಂದಿನ ಐಪಿಎಲ್ ಗೂ ಧೋನಿಯೇ ಚೆನ್ನೈ ನಾಯಕ
ಮುಂಬರುವ ಐಪಿಎಲ್ ನಲ್ಲಿ ಚೆನ್ನೈ ತಂಡಕ್ಕೆ ಹೊಸ ನಾಯಕನ ಆಗಮನವಾಗಬಹುದೇನೋ ಎಂಬ ಆತಂಕದಲ್ಲಿದ್ದ ಅಭಿಮಾನಿಗಳು ಸಮಾಧಾನಪಡುವಂತಹ ವಿಚಾರ ಸಿಕ್ಕಿದೆ. ಧೋನಿಯೇ ಮುಂಬರುವ ಐಪಿಎಲ್ ನಲ್ಲೂ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ‍್ರಾಂಚೈಸಿ ಸ್ಪಷ್ಟನೆ ನೀಡಿದೆ.
ಇದರೊಂದಿಗೆ ಧೋನಿ ಐಪಿಎಲ್ ಗೂ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳಿಗೂ ತೆರೆ ಬಿದ್ದಿದೆ. ಆದರೆ ಜಡೇಜಾ ಚೆನ್ನೈ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.