ರಾಹುಲ್ ಕಳಪೆ ಪ್ರದರ್ಶನಕ್ಕೆ ಅಥಿಯಾಗೆ ದೂರು!

ಭಾನುವಾರ, 13 ನವೆಂಬರ್ 2022 (09:00 IST)
Photo Courtesy: Twitter
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಕಳಪೆ ಫಾರ್ಮ್ ಪ್ರದರ್ಶಿಸಿರುವುದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಬೇಕಾದ ಟೈಮಲ್ಲೇ ಕೊಟ್ಟು ತಂಡಕ್ಕೆ ಸಂಕಷ್ಟ ತಂದೊಡ್ಡಿದ ರಾಹುಲ್ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇವಲ ರಾಹುಲ್ ಮಾತ್ರವಲ್ಲ, ಅವರ ಗರ್ಲ್ ಫ‍್ರೆಂಡ್ ಅಥಿಯಾ ಕೂಡಾ ಟಾರ್ಗೆಟ್ ಆಗಿದ್ದಾರೆ.

ರಾಹುಲ್ ಕಳಪೆ ಫಾರ್ಮ್ ಗೆ ಅಥಿಯಾ ಕಾರಣ ಎಂದಿದ್ದಾರೆ ನೆಟ್ಟಿಗರು. ರಾಹುಲ್ ಜೊತೆ ಅಥಿಯಾ ಕೂಡಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು. ರಾಹುಲ್ ಬ್ಯಾಟಿಂಗ್ ಕಡೆ ಗಮನಕೊಡುವುದಕ್ಕಿಂತ ಗರ್ಲ್ ಫ್ರೆಂಡ್ ಕಡೆಗೆ ಗಮನ ಕೊಟ್ಟಿದ್ದೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನುವುದು ನೆಟ್ಟಿಗರ ಆರೋಪ. ಈ ಮೊದಲು ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾಗ ಅನುಷ್ಕಾ ಶರ್ಮಾ ಟಾರ್ಗೆಟ್ ಆಗುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ