ಸದ್ಯದಲ್ಲೇ ಟೀಂ ಇಂಡಿಯಾ ಕಿರು ಮಾದರಿಗೆ ಹಿರಿಯರ ನಿವೃತ್ತಿ?!

ಭಾನುವಾರ, 13 ನವೆಂಬರ್ 2022 (08:47 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ತೋರಿದ ನಿರ್ವಹಣೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸೆಮಿಫೈನಲ್ ವರೆಗೆ ಬಂದು ಟೀಂ ಇಂಡಿಯಾ ಮುಗ್ಗರಿಸಿದ್ದು ಎಲ್ಲರ ನಿರಾಶೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ತಂಡದಿಂದ ಕೆಲವು ಹಿರಿಯ ಆಟಗಾರರ ನಿವೃತ್ತಿಯಾಗುವ ಸಾಧ‍್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.

ಹಿರಿಯ ಕ್ರಿಕೆಟಿಗರಿಂದಾಗಿ ಕೆಲವು ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಸಂಜು ಸ್ಯಾಮ್ಸನ್ ರಂತಹ ಟಿ20 ಫಾರ್ಮ್ಯಾಟ್ ಗೆ ಹೇಳಿ ಮಾಡಿಸಿದಂತಹ ಆಟಗಾರ ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಹಿರಿಯರನ್ನು ಹೊರಗಿಟ್ಟು ಯವ ಆಟಗಾರರಿಗೆ ಮಣೆ ಹಾಕುವ ಕೆಲಸ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ನಡೆಯುವುದು ಖಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ