ಟಿ20 ವಿಶ್ವಕಪ್ ಫೈನಲ್: ಎರಡನೇ ಪ್ರಶಸ್ತಿ ಮೇಲೆ ಪಾಕ್-ಇಂಗ್ಲೆಂಡ್ ಕಣ್ಣು

ಭಾನುವಾರ, 13 ನವೆಂಬರ್ 2022 (08:30 IST)
WD
ಮೆಲ್ಬೋರ್ನ್: ಟಿ20 ವಿಶ್ವಕಪ್ ಗೆ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಫೈನಲ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಈ ಕೂಟದಲ್ಲಿ ಅದೃಷ್ಟದ ಬಲದಿಂದ ಸೆಮಿಫೈನಲ್ ಗೇರಿದ್ದ ಪಾಕ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಧಿಕಾರಯುತ ಗೆಲುವು ಕಂಡಿತ್ತು. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮಿಂಚಿದ್ದ ಪಾಕ್ ಈಗ ಫೈನಲ್ ಗೆಲ್ಲುವ ವಿಶ್ವಾಸದಲ್ಲಿದೆ. ನಾಯಕ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಫಾರ್ಮ್ ಗೆ ಮರಳಿರುವುದು ಪಾಕ್ ಗೆ ದೊಡ್ಡ ಚೇತರಿಕೆಯಾಗಿದೆ.

ಇನ್ನು, ಇಂಗ್ಲೆಂಡ್ ಟೀಂ ಇಂಡಿಯಾ ವಿರುದ್ಧ ಆಡಿದ ಪರಿ ನೋಡಿದರೆ ಎಲ್ಲರೂ ಬೆಚ್ಚಿ ಬೀಳಿಸುವಂತಿತ್ತು. ಜೋಸ್ ಬಟ್ಲರ್-ಅಲೆಕ್ಸ್ ಹೇಲ್ಸ್ ಪ್ರಚಂಡ ಫಾರ್ಮ್ ಜೊತೆಗೆ ಇಂಗ್ಲೆಂಡ್ ಬ್ಯಾಟಿಂಗ್ ಕೆಳ ಕ್ರಮಾಂಕದವರೆಗೆ ಸದೃಢವಾಗಿದೆ. ಜೊತೆಗೆ ಬೌಲಿಂಗ್ ಕೂಡಾ ಅತ್ಯುತ್ತಮವಾಗಿದೆ. ಹೀಗಾಗಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹಾಗಿದ್ದರೂ ಟಾಸ್ ನಿರ್ಣಾಯಕವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ