ಸಪಾಟೆ ಪಿಚ್ ನಲ್ಲಿ ಟೀಂ ಇಂಡಿಯಾ ಬೌಲರ್ ಗಳ ಚೆಂಡಾಡಿದ ಆಸೀಸ್ ಬ್ಯಾಟ್ಸ್ ಮನ್ ಗಳು

ಶುಕ್ರವಾರ, 27 ನವೆಂಬರ್ 2020 (13:24 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಗೆಲ್ಲಲು ಅತಿಥೇಯರು ಟೀಂ ಇಂಡಿಯಾಗೆ 375 ರನ್ ಗಳ ಗುರಿ ನೀಡಿದ್ದಾರೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿರುವ ಆಸೀಸ್ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿದೆ. ಸಪಾಟೆ ಪಿಚ್ ನಲ್ಲಿ ಭಾರತೀಯರು ವಿಕೆಟ್ ಗಳಿಸಲು ಹೆಣಗಾಡಬೇಕಾಯಿತು. ಮೊದಲ ವಿಕೆಟ್ ಗೆ ಏರಾನ್ ಫಿಂಚ್-ಡೇವಿಡ್ ವಾರ್ನರ್ ಜೋಡಿ ಬರೋಬ್ಬರಿ 156 ರನ್ ಕೆಲ ಹಾಕಿತು. ಈ ಪೈಕಿ ವಾರ್ನರ್ 69 ರನ್ ಗಳಿಸಿದರೆ ನಾಯಕನ ಆಟವಾಡಿದ ಫಿಂಚ್ 114 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಟೀವ್ ಸ್ಮಿತ್ ಬಿರುಸಿನ ಆಟಕ್ಕೆ ಕೈ ಹಾಕಿ 66 ಎಸೆತಗಳಲ್ಲೇ 105 ಸಿಡಿಸಿದರೆ ಕೆಳ ಕ್ರಮಾಂಕದಲ್ಲಿ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 19 ಎಸೆತಗಳಿಂದ 45 ರನ್ ಚಚ್ಚಿದರು. ಭಾರತದ ಪರ ಮೊಹಮ್ಮದ್ ಶಮಿ 3, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್ ಮತ್ತು ನವದೀಪ್ ಸೈನಿ ತಲಾ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ