ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಪಾಲೆಕೆಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 7ವಿಕೆಟ್‌ಗೆ 314 ರನ್‌ಗಳ ಉತ್ತಮ ಮೊತ್ತವನ್ನು ಕಲೆಹಾಕಿದ್ದು, 228 ರನ್ ಲೀಡ್ ಗಳಿಸಿದೆ. ಶ್ರೀಲಂಕಾ 282ಕ್ಕೆ 6 ವಿಕೆಟ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿತ್ತು.
ಪ್ರವಾಸಿ ತಂಡದಲ್ಲಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಮತ್ತು ನಾಥನ್ ಲಯನ್ 2 ವಿಕೆಟ್ ಕಬಳಿಸಿದರು. ಮೆಂಡಿಸ್ ಅವರೊಂದಿಗೆ ದಿನೇಶ್ ಚಾಂಡಿಮಾಲ್ ಮತ್ತು ಧನಂಜಯ ಡಿಸಿಲ್ವ ಉತ್ತಮ ಜತೆಯಾಟವಾಡಿದರು. ಚಾಂಡಿಮಾಲ್ 42 ರನ್ ಮತ್ತು ಡಿ ಸಿಲ್ವ 36 ರನ್ ಗಳಿಸಿದರು. ಶ್ರೀಲಂಕಾ 7 ವಿಕೆಟ್ ಕಳೆದುಕೊಂಡಿದ್ದು, ಪೆರೇರಾ ಮತ್ತು ರಂಗನಾಥ್ ಹೆರಾತ್ ಬ್ಯಾಟಿಂಗ್ ಆಡುತ್ತಿದ್ದಾರೆ.
ಸ್ಕೋರು ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ 117ಕ್ಕೆ 10
ಮಿಚೆಲ್ ಸ್ಟಾರ್ಕ್ 2 ವಿಕೆಟ್, ಹ್ಯಾಜಲ್‌ವುಡ್ 3 ವಿಕೆಟ್, ಸ್ಟೀವ್ ಕೀಫ್ 2, ನಾಥನ್ ಲಯನ್ 3 ವಿಕೆಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 203ಕ್ಕೆ 10 ವಿಕೆಟ್
ರಂಗನಾಥ್ ಹೆರಾತ್ 4 ವಿಕೆಟ್ ಮತ್ತು ಸಂದಾಕನ್ 4 ವಿಕೆಟ್, ನುವಾನ್ ಪ್ರದೀಪ್ 2 ವಿಕೆಟ್
ಶ್ರೀಲಂಕಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ 314ಕ್ಕೆ 7 ವಿಕೆಟ್
ಕುಸಾಲ್ ಮೆಂಡಿಸ್ 176, ಚಾಂಡಿಮಾಲ್ 42 ಮತ್ತು ಡಿ ಸಿಲ್ವ 36.
ವಿಕೆಟ್ ಪತನ
6-1 (ಕುಸಾಲ್ ಪೆರೆರಾ, 2.2), 6-2 (ದಿಮುತ್ ಕರುಣಾರತ್ನೆ, 2.5), 45-3 (ಕೌಶಲ್ ಸಿಲ್ವಾ, 12.2), 86-4 (ಆ್ಯಂಜೆಲೊ ಮ್ಯಾಥ್ಯೂಸ್, 27.1), 203-5 (ದಿನೇಶ್ ಚಾಂಡಿಮಾಲ್, 58.1), 274-6 (ಧನಂಜಯ ಡಿ ಸಿಲ್ವ, 77.3), 290-7 (ಕುಸಾಲ್ ಮೆಂಡಿಸ್, 82.1), 314-8 (ದಿಲ್‌ರುವಾನ್ ಪೆರೆರಾ, 87.4)