RR vs MI Match: ಟಾಸ್‌ ಗೆದ್ದ ರಾಜಸ್ಥಾನ್‌, ಫೀಲ್ಡಿಂಗ್ ಆಯ್ಕೆ

Sampriya

ಗುರುವಾರ, 1 ಮೇ 2025 (19:27 IST)
Photo Credit X
ಜೈಪುರ: ಗುರುವಾರ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್‌ ಮುಖಾಮುಖಿಯಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಈ ಹಿಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಾಟದಲ್ಲಿ ಡವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಸೆಂಚುರಿ ಭಾರಿಸುವ ಮೂಲಕ ಗಮನಸೆಳೆದಿದ್ದರು. ಅದಲ್ಲದೆ ರಾಜಸ್ಥಾನ್ ಗೆಲುವಿಗೆ ಪ್ರಮುಖ ಕಾರಣಕರ್ತರಾದರು.

ಇದೀಗ ಮುಂಬೈ ಇಂಡಿಯನ್ಸ್‌ ವಿರುದ್ಧವೂ ಅದೇ ಪ್ರದರ್ಶನವನ್ನು ನೀಡಲು ರಾಜಸ್ಥಾನ ಸಜ್ಜಾಗಿ, ಗ್ರೌಂಡ್‌ಗಿಳಿದಿದೆ.

ಮುಂಬೈ ಪ್ರಕಾರ, ಅವರು ಸತತವಾಗಿ ಐದು ಪಂದ್ಯಗಳನ್ನು ಗೆದ್ದಿದ್ದಾರೆ .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ