Rohit Sharma: ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ ಡಿಆರ್ ಎಸ್ ನಿಯಮವೇ ಬೇರೇನಾ: ವಿಡಿಯೋ ನೋಡಿ ಡಿಸೈಡ್ ಮಾಡಿ

Krishnaveni K

ಶುಕ್ರವಾರ, 2 ಮೇ 2025 (09:21 IST)
Photo Credit: X
ಜೈಪುರ: ಐಪಿಎಲ್ 2025 ರಲ್ಲಿ ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಆಟಗಾರ ರೋಹಿತ್ ಶರ್ಮಾ ಡಿಆರ್ ಎಸ್ ತೆಗೆದುಕೊಂಡ ಪರಿ ನೋಡಿದರೆ ಈ ತಂಡಕ್ಕೆ ಮಾತ್ರ ನಿಯಮವೇ ಬೇರೆಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುವಂತಾಗಿದೆ.

ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಮುಂಬೈ 100 ರನ್ ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 2 ವಿಕೆಟ್ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ರಾಜಸ್ಥಾನ್ 117 ರನ್ ಗಳಿಗೆ ಆಲೌಟ್ ಆಯಿತು.

ಮುಂಬೈ ಆರಂಭಿಕ ರೋಹಿತ್ ಶರ್ಮಾ ಮತ್ತು ರಿಕಲ್ಟನ್ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಪ್ಯಾಡ್ ಗೆ ತಗುಲಿದ ಕಾರಣ ಅಂಪಾಯರ್ ಎಲ್ ಬಿಡಬ್ಲ್ಯು ಔಟ್ ತೀರ್ಪಿತ್ತರು.

ಆದರೆ ರೋಹಿತ್ ಜೊತೆಗಾರನ ಜೊತೆ ಚರ್ಚಿಸಿ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಆದರೆ ಡಿಆರ್ ಎಸ್ ತೆಗೆದುಕೊಳ್ಳುವಷ್ಟರಲ್ಲಿ ಸಮಯ ಮೀರಿ ಶೂನ್ಯ ಸೆಕೆಂಡ್ ಗೆ ಬಂದಿತ್ತು. ಹಾಗಿದ್ದರೂ ರೋಹಿತ್ ಮನವಿಯನ್ನು ಅಂಪಾಯರ್ ಪುರಸ್ಕರಿಸಿ ಥರ್ಡ್ ಅಂಪಾಯರ್ ಗೆ ಮನವಿ ಸಲ್ಲಿಸಿದರು. ಸಾಮಾನ್ಯವಾಗಿ ಸಮಯ ಕಳೆದ ಮೇಲೆ ಡಿಆರ್ ಎಸ್ ತೆಗೆದುಕೊಳ್ಳುವಂತಿಲ್ಲ, ತೆಗೆದುಕೊಂಡರೂ ಅಂಪಾಯರ್ ಅದನ್ನು ಮಾನ್ಯ ಮಾಡುವುದಿಲ್ಲ.

ಆದರೆ ರೋಹಿತ್ ಮನವಿಯನ್ನು ಸಮಯ ಮೀರಿದರೂ ಅಂಪಾಯರ್ ಪುರಸ್ಕರಿಸಿದ್ದು  ವಿವಾದಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ಪರವಾಗಿ ಅಂಪಾಯರ್ ಗಳೂ ಇದ್ದಾರೆ. ಇದು ಮೋಸದಾಟ, ಇವರಿಗೆ ಮಾತ್ರ ಪ್ರತ್ಯೇಕ ನಿಯಮವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

I’m a die-hard fan of Rohit Sharma, but this is a complete fixing, bro. I hope RR wins this match and Mumbai doesn’t win the final — whichever team reaches the final, let them win instead.#MIvsRR pic.twitter.com/y9Tuq9Nsgg

— Priyanshu Verma (@iPriyanshVerma) May 1, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ