ರೋಚಕ ಪಂದ್ಯದಲ್ಲಿ ಅಂಪಾಯರ್, ಲಂಕಾ ಆಟಗಾರರ ಜತೆ ಬಾಂಗ್ಲಾ ಆಟಗಾರರ ಜಗಳ!

ಶನಿವಾರ, 17 ಮಾರ್ಚ್ 2018 (09:28 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದಲ್ಲಿ ಗೆದ್ದ ಬಾಂಗ್ಲಾ ಟೀಂ ಇಂಡಿಯಾ ಜತೆ ಫೈನಲ್ಸ್ ನಲ್ಲಿ ಸೆಣಸಲಿದೆ. ಆದರೆ ರೋಚಕ ಘಟ್ಟದಲ್ಲಿ ಬಾಂಗ್ಲಾ ಆಟಗಾರರು ತಗಾದೆ ತೆಗೆದು ಸುದ್ದಿಯಾದರು.

ಆಗ ಲಂಕಾ ಗೆಲುವಿಗೆ 3 ಬಾಲ್ ಗಳಲ್ಲಿ 8 ರನ್ ಬೇಕಾಗಿತ್ತು. ಮೊಹಮ್ಮದುಲ್ಲಾ ಮತ್ತು ಮುಸ್ತಾಫಿಜ್ ಬ್ಯಾಟಿಂಗ್ ಮಾಡುತ್ತಿದ್ದರು. ಓವರ್  ಮೊದಲ ಎಸೆತದಲ್ಲಿ ಔಟ್ ಎಂದು ತೀರ್ಪು ನೀಡಿದ್ದ ಅಂಪಾಯರ್, ನಂತರ ರಿವ್ಯೂ ಬಳಸಿದ್ದರಿಂದ ನಾಟೌಟ್ ಎಂದರು. ಆದರೆ ಮರು ಎಸೆತಕ್ಕೇ ಮತ್ತೆ ಮುಸ್ತಾಫಿಜ್ ರನೌಟಾದರು.

ಈ ಎಸೆತ ಮುಸ್ತಾಫಿರ್ ಬ್ಯಾಟ್ ಗೆ ತಾಕದೇ ವಿಕೆಟ್ ಕೀಪರ್ ಕೈ ಸೇರಿತು. ಆದರೆ ರನ್ ಗಳಿಸಲು ಮುಸ್ತಾಫಿಜ್ ಓಡಿದರು. ಆದರೆ ಈ ಸಂದರ್ಭದಲ್ಲಿ ಅಂಪಾಯರ್ ನೋ ಬಾಲ್ ಎಂದು ಸಿಗ್ನಲ್ ಮಾಡಲು ಹೊರಟ ಅಂಪಾಯರ್ ಮುಸ್ತಾಫಜ್ ರನೌಟ್ ಆಗುತ್ತಿದ್ದಂತೆ ಕೈ ಹಿಂಪಡೆದರು.

ಇದು ಬಾಂಗ್ಲಾ ಆಟಗಾರರನ್ನು ಕೆರಳಿಸಿತು. ತಕ್ಷಣ ಮೈದಾನಕ್ಕಿಳಿದ ಆಟಗಾರರು ಅಂಪಾಯರ್, ಲಂಕಾ ನಾಯಕನ ಜತೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಪಂದ್ಯ ನಿಂತಿತು. ನಂತರ ಬಾಂಗ್ಲಾ ಆಟಗಾರರನ್ನು ಮನ ಒಲಿಸಿ ಆಟ ಮುಂದುವರಿಸಲಾಯಿತು. ಅಂತಿಮ ಬಾಲ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಬಾಂಗ್ಲಾ ಲಂಕಾ ನೀಡಿದ 160 ರನ್ ಗಳ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಕಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ