ಭಾರತ-ಬಾಂಗ್ಲಾ ಟೆಸ್ಟ್: ಭೋಜನ ವಿರಾಮಕ್ಕೆ ಮೊದಲು ಬಾಂಗ್ಲಾ ಎರಡು ವಿಕೆಟ್ ಪತನ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಬಾಂಗ್ಲಾ ಆರಂಭದಲ್ಲಿ ಉತ್ತಮ ಆರಂಭ ನೀಡುವ ಸೂಚನೆ ನೀಡಿತು. ಆದರೆ 15 ರನ್ ಗಳಿಸಿದ್ದ ಝಾಕಿರ್ ಹಸನ್ ಜಯದೇವ್ ಉನಾದ್ಕಟ್ ಗೆ ವಿಕೆಟ್ ಒಪ್ಪಿಸಿದರು. ಅದಾದ ಬಳಿಕ ನಜ್ಮುಲ್ ಹೊಸೈನ್ ಶಾಂತೋ 24 ರನ್ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಆದರು. ಇದರೊಂದಿಗೆ ಬಾಂಗ್ಲಾ ಎರಡು ವಿಕೆಟ್ ಕಳೆದುಕೊಂಡಿತು.
ಇದೀಗ 23 ರನ್ ಗಳಿಸಿರುವ ಮೊಮಿನುಲ್ ಹಕ್ ಮತ್ತು 16 ರನ್ ಗಳಿಸಿರುವ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.