ಭಾರತ-ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯಕ್ಕೆ ಬಾರಾಬತಿ ಸಜ್ಜು

ಬುಧವಾರ, 18 ಜನವರಿ 2017 (12:43 IST)
ಕಟಕ್: ನಾಳೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಕಳೆದ ಬಾರಿ ನಡೆದ ಅಹಿತಕರಾಗಿ ಘಟನೆ ಮರುಕಳಿಸದಂತೆ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ.


ಕಳೆದ ಬಾರಿ ಇಲ್ಲಿ ದ. ಆಫ್ರಿಕಾ ವಿರುದ್ಧ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಈ ಪಂದ್ಯದ ವೇಳೆ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ಬಾಟಲಿ ಎಸೆದಿದ್ದರು.  ಈ ಘಟನೆ ಮತ್ತೆ ಮರುಕಳಿಸದಂತೆ  ಈ ಬಾರಿ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿ ಮೈದಾನದೊಳಕ್ಕೆ ನೀರಿನ ಬಾಟಲಿ ತೆಗೆದುಕೊಂಡು ಹೋಗುವಂತಿಲ್ಲ. ಅದರ ಬದಲಿಗೆ ಮೈದಾನದೊಳಗೇ ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ನೀರು ವಿತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಪ್ರೇಕ್ಷಕರ ಗ್ಯಾಲರಿಗೆ ನೆಟ್ ಬಳಸಿ ಕ್ರೀಡಾಂಗಣಕ್ಕೆ ಯಾವುದೇ ವಸ್ತು ಎಸೆಯದಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭಾರತದಲ್ಲಿ ಕ್ರಿಕೆಟ್ ನ ಹುಚ್ಚು ಆರಾಧಕರಿದ್ದಾರೆ. ಇಲ್ಲಿ ಸೋಲನ್ನು ಸ್ವೀಕರಿಸಲು ಅಭಿಮಾನಿಗಳು ತಯಾರಿಲ್ಲ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಿಂದ ಸುರಕ್ಷತೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ