ಕ್ರಿಕೆಟ್ ದಿಗ್ಗಜ ಸಚಿನ್, ಕೊಹ್ಲಿಗೆ ಬ್ಯಾಟ್ ರಿಪೇರಿ ಮಾಡಿಕೊಡುತ್ತಿದ್ದ ವ್ಯಕ್ತಿ ಈಗ ಸಂಕಷ್ಟದಲ್ಲಿ

ಗುರುವಾರ, 20 ಆಗಸ್ಟ್ 2020 (13:26 IST)
ಮುಂಬೈ: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಮುಂತಾದವರಿಗೆ ಕ್ರಿಕೆಟ್ ಬ್ಯಾಟ್ ಸರಿಮಾಡಿಕೊಡುತ್ತಿದ್ದ ಅಶ್ರಫ್ ಚೌಧರಿ ಈಗ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ.


ಭಾರತೀಯ ಕ್ರಿಕೆಟಿಗರಿಗೆ ಮಾತ್ರವಲ್ಲದೆ, ದ.ಆಫ್ರಿಕಾ, ಆಸ್ಟ್ರೇಲಿಯಾ ಕ್ರಿಕೆಟಿಗರ ಬ್ಯಾಟ್ ಸಮಸ್ಯೆಯನ್ನೂ ಸರಿಮಾಡಿಕೊಡುತ್ತಿದ್ದ ಅಶ್ರಫ್ ಮುಂಬೈನ ವಾಂಖೆಡೆ ಮೈದಾನ ಬಳಿ ಬೀಡುಬಿಟ್ಟಿದ್ದರು. ಇದನ್ನೇ ವೃತ್ತಿಯಾಗಿಸಿಕೊಂಡಿದ್ದ ಅಶ್ರಫ್ ಇಂದು ಸಂಕಷ್ಟದಲ್ಲಿದ್ದಾರೆ.

ಕಿಡ್ನಿ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿರುವ ಅಶ್ರಫ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಒದ್ದಾಡುತ್ತಿದ್ದಾರೆ.  ಅವರ ಆಪ್ತರು ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ