ಚೀನಾ ಬಿಟ್ಟು ಐಪಿಎಲ್ 13 ನಡೆಸಲು ಸಾಧ್ಯ ವಿಲ್ಲವೇ? ನೆಟ್ಟಿಗರ ಸಿಟ್ಟು

ಗುರುವಾರ, 20 ಆಗಸ್ಟ್ 2020 (12:16 IST)
ಮುಂಬೈ: ಐಪಿಎಲ್ 13 ಗೆ ಚೀನಾ ಹೂಡಿಕೆ ಮಾಡಿರುವ ಡ್ರೀಮ್ 11 ಕಂಪನಿ ಟೈಟಲ್ ಪ್ರಾಯೋಜಕತ್ವ ವಹಿಸಿದ ಬೆನ್ನಲ್ಲೇ ಅಪಸ್ವರಗಳು ಕೇಳಿಬಂದಿವೆ.


ವಿವೋ ಪ್ರಾಯೋಜಕತ್ವದಿಂದ ಹೊರಬಿದ್ದ ಮೇಲೆ ಅಂತೂ ಚೀನಾವನ್ನು ಹೊರ ಹಾಕಿದೆವು ಎಂದು ನಿಟ್ಟುಸಿರುವ ಬಿಡುತ್ತಿರುವಾಗಲೇ ಅದೇ ಕಿರಿಕ್ ಚೀನಾ ಮೂಲದ ಕಂಪನಿ ಷೇರು ಹೊಂದಿರುವ ಡ್ರೀಮ್ 11 ಆ ಸ್ಥಾನಕ್ಕೆ ಬಂದಿದೆ.

ಇದು ಅಭಿಮಾನಿಗಳಲ್ಲಿ ಮತ್ತೆ ಅಪಸ್ವರ ಮೂಡಿಸಿದೆ. ಚೀನಾ ಕಂಪನಿಗಳನ್ನು ಬಿಟ್ಟು ಐಪಿಎಲ್ ನಡೆಸಲು ಸಾಧ‍್ಯವಿಲ್ಲವೇ? ನಮ್ಮದೇ ದೇಶದ ಕಂಪನಿಗೆ ಮಣೆ ಹಾಕುವ ಬದಲು ಬಿಸಿಸಿಐ ಹಣಕ್ಕೇ ಹೆಚ್ಚು ಪ್ರಾತಿನಿಧ್ಯ ನೀಡಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ