ಟಾಟಾ ಸಂಸ್ಥೆ ಐಪಿಎಲ್ ನಲ್ಲಿ ಬಿಡ್ಡಿಂಗ್ ಸಲ್ಲಿಸಿಲ್ಲ ಯಾಕೆ? ಕಾರಣ ಕೇಳಿದರೆ ಬೆರಗಾಗುತ್ತೀರಿ!

ಗುರುವಾರ, 20 ಆಗಸ್ಟ್ 2020 (12:41 IST)
ಮುಂಬೈ: ವಿವೋ ಸಂಸ್ಥೆ ಐಪಿಎಲ್ ನಿಂದ ಹಿಂದೆ ಸರಿಯುತ್ತಿದ್ದಂತೇ ಟೈಟಲ್ ಪ್ರಾಯೋಜಕತ್ವ ವಹಿಸಲು ಹಲವು ಕಂಪನಿಗಳು ಮುಂದೆ ಬಂದವು. ಅದರಲ್ಲಿ ಟಾಟಾ ಸಮೂಹ ಸಂಸ್ಥೆಯ ಹೆಸರೂ ಮುಂಚೂಣಿಯಲ್ಲಿತ್ತು.


ಆದರೆ ಅಂತಿಮ ಕ್ಷಣದಲ್ಲಿ ಟಾಟಾ ಸಂಸ್ಥೆ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಕಾರಣವೇನು ಗೊತ್ತಾ? ಇದಕ್ಕೆ ಕಂಪನಿಯ ಹಳೆಯ ಪಾಲಿಸಿಯೇ ಕಾರಣ ಎನ್ನಲಾಗಿದೆ.

ಟಾಟಾ ಸಂಸ್ಥೆ ಮೊದಲಿನಿಂದಲೂ ಕ್ರಿಕೆಟ್ ನಿಂದ ದೂರವೇ ಉಳಿದಿತ್ತು. ಈಗ ಹಳೆಯ ಪದ್ಧತಿ ಬಿಟ್ಟು ಕ್ರಿಕೆಟ್ ನಲ್ಲಿ ಹೂಡಿಕೆ ಮಾಡಲು ಹೊರಟಿದೆಯಾದರೂ ಕೆಲವು ತಾಂತ್ರಿಕ ವಿಚಾರಗಳಿಗೆ ಬಿಸಿಸಿಐ ಒಪ್ಪಲಿಲ್ಲ. ಇದೇ ಕಾರಣಕ್ಕೆ ಟಾಟಾ ಬಿಡ್ಡಿಂಗ್ ಸಲ್ಲಿಸುವುದರಿಂದ ಹಿಂದೆ ಸರಿಯಿತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ