ಭಾರತದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐನಿಂದ ದಿನಾಂಕ ಪ್ರಕಟ

ಶುಕ್ರವಾರ, 15 ಜುಲೈ 2016 (14:27 IST)
ಬಿಸಿಸಿಐ ಇಂಗ್ಲೆಂಡ್ ವಿರುದ್ಧ ಭಾರತದ ಸ್ವದೇಶಿ ಸರಣಿಗೆ ದಿನಾಂಕಗಳನ್ನು ಮತ್ತು ಮೈದಾನಗಳನ್ನು ಬಹಿರಂಗ ಮಾಡಿದೆ. ಇಂಗ್ಲೆಂಡ್ ಐದು ಟೆಸ್ಟ್ ಪಂದ್ಯಗಳನ್ನು, ಮೂರು ಏಕದಿನ ಪಂದ್ಯಗಳನ್ನು ಮತ್ತು ಮೂರು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು, ಐದು ಟೆಸ್ಟ್ ಸರಣಿಯ ಮೊದಲ ಟೆಸ್ಟ್  ನವೆಂಬರ್ 9ರಂದು ರಾಜಕೋಟ್‌ನಲ್ಲಿ ಆರಂಭವಾಗಲಿದೆ.

ಇವೆರಡೂ ತಂಡಗಳ ನಡುವೆ 2012ರ ಸರಣಿ ನಿಯಮದ ಪ್ರಕಾರ, ಇಂಗ್ಲೆಂಡ್ ಸ್ವದೇಶಕ್ಕೆ ಹಿಂತಿರುಗುವ ಮುಂಚೆ ಮೊದಲಿಗೆ ಟೆಸ್ಟ್ ಪಂದ್ಯಗಳನ್ನು ಆಡುತ್ತದೆ.  2017ರ ಜನವರಿಯಲ್ಲಿ ಪುನಃ ಹಿಂತಿರುಗಿ ಏಕ ದಿನ ಮತ್ತು ಟಿ 20 ಪಂದ್ಯಗಳನ್ನು ಪೂರ್ಣಗೊಳಿಸುತ್ತದೆ.

ಬಿಸಿಸಿಐ ಈ ವರ್ಷದಲ್ಲಿ ಇಂಡೋರ್, ರಾಜಕೋಟ್, ವಿಶಾಖಪಟ್ನಂ, ಧರ್ಮಶಾಲಾ, ರಾಂಚಿ ಮತ್ತು ಪುಣೆಯಲ್ಲಿ ಟೆಸ್ಟ್ ಆಡುವ ಮೈದಾನಗಳನ್ನು ಪ್ರಕಟಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ