ಟೀಂ ಇಂಡಿಯಾಕ್ಕೆ ಮತ್ತೆ ಕೋಚ್ ಆಗಬೇಕಾದರೆ ರಾಹುಲ್ ದ್ರಾವಿಡ್ ಗೆ ಅರ್ಜಿ ಹಾಕಿ ಎಂದ ಬಿಸಿಸಿಐ

Krishnaveni K

ಶುಕ್ರವಾರ, 10 ಮೇ 2024 (13:42 IST)
ಮುಂಬೈ: ಟೀಂ ಇಂಡಿಯಾ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಮುಕ್ತಾಯಗೊಳ್ಳುತ್ತಿದ್ದು ಮತ್ತೆ ಕೋಚ್ ಆಗಿ ಮುಂದುವರಿಯಬೇಕೆಂದರೆ ಹೊಸದಾಗಿ ಅರ್ಜಿ ಸಲ್ಲಿಸಿ ಎಂದು ಬಿಸಿಸಿಐ ಸಲಹೆ ನೀಡಿದೆ.

ಕಳೆದ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಕೋಚ್ ಅವಧಿ ಮುಕ್ತಾಯವಾಗಿತ್ತು. ಬಳಿಕ ದ್ರಾವಿಡ್ ರನ್ನು ಬಿಸಿಸಿಐ ಮತ್ತೆ ಆರು ತಿಂಗಳಿಗೆ ಅವಧಿ ವಿಸ್ತರಿಸಿತ್ತು. ಅದರಂತೆ ಈ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಅವಧಿಯಿರಲಿದೆ. ಜೂನ್ ಬಳಿಕ ದ್ರಾವಿಡ್ ಕೋಚ್ ಅವಧಿ ಮುಕ್ತಾಯವಾಗಲಿದೆ.

ಇದೀಗ ಬಿಸಿಸಿಐ ಹೊಸ ಕೋಚ್ ಗಳಿಗಾಗಿ ಹುಡುಕಾಟ ನಡೆಸಿದ್ದು, ಅರ್ಜಿ ಆಹ್ವಾನಿಸಿದೆ. ಒಂದು ವೇಳೆ ದ್ರಾವಿಡ್ ಅವರು ಮತ್ತೆ ತಂಡದಲ್ಲಿ ಕೋಚ್ ಆಗಿ ಮುಂದುವರಿಯಬೇಕಾದರೆ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಲು ಸೂಚಿಸಲಿದೆ. ಒಂದು ವೇಳೆ ದ್ರಾವಿಡ್ ಮತ್ತೆ ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ಅವಕಾಶ ಸಿಗಲಿದೆ.

ಒಂದು ವೇಳೆ ಈ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿದ್ದರೆ ದ್ರಾವಿಡ್ ರನ್ನೇ ಮುಂದುವರಿಸಲು ಬಿಸಿಸಿಐ ಮನಸ್ಸು ಮಾಡಬಹುದು. ಇಲ್ಲದೇ ಹೋದರೆ ಹೊಸ ಕೋಚ್ ಗಳಿಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಈ ಟಿ20 ವಿಶ್ವಕಪ್ ದ್ರಾವಿಡ್ ಪಾಲಿಗೂ ಮಹತ್ವದ್ದಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ