ಚೆನ್ನೈನಲ್ಲೇ ನಡೆಯಲಿದೆ ಸಿಎಸ್ ಕೆ ಆಟಗಾರರ ಐಪಿಎಲ್ ತಯಾರಿ

ಸೋಮವಾರ, 10 ಆಗಸ್ಟ್ 2020 (11:12 IST)
ಚೆನ್ನೈ: ಐಪಿಎಲ್ 13 ಗೆ ತಯಾರಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ತೆರಳುವ ಮೊದಲು ತವರಿನಲ್ಲಿ ಒಂದು ವಾರಗಳ ಕಾಲ ತರಬೇತಿ ಕ್ಯಾಂಪ್ ಆಯೋಜಿಸಲಿದೆ.


ಸದ್ಯಕ್ಕೆ ಭಾರತದಲ್ಲಿ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಆದರೆ ತರಬೇತಿ ನಡೆಸುವುದಕ್ಕೆ ತೊಂದರೆಯಿಲ್ಲ. ಇದೀಗ ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆದಿರುವ ಚೆನ್ನೈ ತಂಡ ಒಂದು ವಾರದ ಕ್ಯಾಂಪ್ ಆಯೋಜಿಸಲು ತೀರ್ಮಾನಿಸಿದೆ.

ಈ ತರಬೇತಿ ಕ್ಯಾಂಪ್ ಗೆ ಧೋನಿ, ಸುರೇಶ್ ರೈನಾ ಸೇರಿದಂತೆ ಹಿರಿಯ ಆಟಗಾರರೂ ಆಗಮಿಸಲಿದ್ದಾರೆ. ಯುಎಇಗೆ ಎಲ್ಲರಿಗಿಂತ ಮೊದಲೇ ತೆರಳಲು ಪ್ಲ್ಯಾನ್ ಮಾಡಿಕೊಂಡಿರುವ ಸಿಎಸ್ ಕೆ ತರಬೇತಿ ಆಯೋಜಿಸುವಲ್ಲೂ ಮೊದಲಿಗನಾಗುವ ಲಕ್ಷಣವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ