ಟೈಮ್ ಇಲ್ಲ, ಅದಕ್ಕೇ ಈ ಬಾರಿ ಮಹಿಳೆಯರಿಗೆ ವಿಶ್ವಕಪ್ ಇಲ್ಲ

ಸೋಮವಾರ, 10 ಆಗಸ್ಟ್ 2020 (12:06 IST)
ಮುಂಬೈ: ಈ ಬಾರಿ ಮಹಿಳೆಯರಿಗೆ ಏಕದಿನ ವಿಶ್ವಕಪ್ ನಡೆಯಲ್ಲ. ಇದಕ್ಕೆ ಕಾರಣ ತಯಾರಿ ನಡೆಸಲು ಸಮಯವಿಲ್ಲ ಎಂದು ಐಸಿಸಿ ತಿಳಿಸಿದೆ.


2021 ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯನ್ನು ರದ್ದುಮಾಡಿದೆ. ಕೊರೋನಾದಿಂದಾಗಿ ತಯಾರಿ ನಡೆಸಲು ಸಮಯವಿಲ್ಲ. ಇದೇ ಕಾರಣಕ್ಕೆ ಟೂರ್ನಮೆಂಟ್ ರದ್ದುಗೊಳಿಸುತ್ತಿರುವುದಾಗಿ ಐಸಿಸಿ ಸಿಇಒ ಆಂಡ್ರಿಯಾ ನೆಲ್ಸನ್ ಹೇಳಿದ್ದಾರೆ.

ಈ ಮೊದಲು ಜುಲೈನಲ್ಲಿ ಟೂರ್ನಮೆಂಟ್ ನಡೆಯುವುದೆಂದು ನಿಗದಿಯಾಗಿತ್ತು. ಆದರೆ ಕೊರೋನಾ ಕಾರಣದಿಂದ ಫೆಬ್ರವರಿಗೆ ಮುಂದೂಡಲಾಗಿತ್ತು. ಆದರೆ ಇದೀಗ ಕೂಟವನ್ನೇ ರದ್ದುಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ