ರಿಷಬ್ ಪಂತ್ ಜೆರ್ಸಿ ತೂಗು ಹಾಕಿದ್ದಕ್ಕೆ ಡೆಲ್ಲಿ ತಂಡಕ್ಕೆ ಬಿಸಿಸಿಐ ಆಕ್ಷೇಪ

ಬುಧವಾರ, 5 ಏಪ್ರಿಲ್ 2023 (08:40 IST)
Photo Courtesy: Twitter
ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಪಾಲ್ಗೊಳ್ಳುತ್ತಿಲ್ಲ. ಆದರೆ ಅವರ ಅನುಪಸ್ಥಿತಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಾಡುತ್ತಿದೆ.

ಇದಕ್ಕಾಗಿ ಡೆಲ್ಲಿ ತಂಡ ಐಪಿಎಲ್ 2023 ರ ಎಲ್ಲಾ ಪಂದ್ಯದಲ್ಲಿ ತಾವು ಕೂರುವ ಡಗೌಟ್ ನಲ್ಲಿ ರಿಷಬ್ ಪಂತ್ ಹೆಸರಿನ ಜೆರ್ಸಿಯನ್ನು ತೂಗು ಹಾಕಿ ಅವರಿಗೆ ಗೌರವ ಸಲ್ಲಿಸುತ್ತಿದೆ.

ಆದರೆ ಇದಕ್ಕೆ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಪಡೆ ಆಕ್ಷೇಪ  ವ್ಯಕ್ತಪಡಿಸಿದೆ. ಒಬ್ಬ ಆಟಗಾರ ಸಾವನ್ನಪ್ಪಿದರೆ ಅಥವಾ ನಿವೃತ್ತಿಯಾದರೆ ಮಾತ್ರ ಈ ರೀತಿ ಗೌರವ ಸಲ್ಲಿಸಲಾಗುತ್ತದೆ. ಆದರೆ ರಿಷಬ್ ಈಗ ರಸ್ತೆ ಅಪಘಾತದಿಂದ ಗಾಯಗೊಂಡಿದ್ದು, ಅವರು ಮತ್ತೆ ಕ್ರಿಕೆಟ್ ಗೆ ಮರಳಲಿದ್ದಾರೆ. ಹೀಗಾಗಿ ಇಂತಹ ನಡೆ ಬೇಡ ಎಂದು ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ