ಏಷ್ಯಾ ಕಪ್ ನಲ್ಲಿ ಧೋನಿ ನಾಯಕರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಬಿಸಿಸಿಐ?!

ಗುರುವಾರ, 29 ನವೆಂಬರ್ 2018 (09:14 IST)
ಮುಂಬೈ: ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಧೋನಿಗೆ ನಾಯಕತ್ವ ವಹಿಸಿದ್ದು, ಬಿಸಿಸಿಐಗೆ ಇಷ್ಟವಿರಲಿಲ್ಲವಂತೆ!


ಹಾಗೊಂದು ವಿಚಾರವನ್ನು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಏಷ್ಯಾ ಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಾವು ವಿಶ್ರಾಂತಿ ಪಡೆದು ಧೋನಿಗೆ ನಾಯಕತ್ವ ವಹಿಸಿ ಅಚ್ಚರಿ ಮೂಡಿಸಿದ್ದರು.

ಆದರೆ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಇದು ಇಷ್ಟವಾಗಿರಲಿಲ್ಲವಂತೆ. ಧೋನಿ ಬದಲು ತಂಡದಲ್ಲಿದ್ದ ಬೇರೆ ಹಿರಿಯ ಆಟಗಾರರಿಗೆ ನಾಯಕತ್ವ ನೀಡಬೇಕಿತ್ತು ಎಂಬುದು ಬಿಸಿಸಿಐ ಆಡಳಿತಾಧಿಕಾರಿಗಳೊಬ್ಬರ ಅಭಿಪ್ರಾಯವಾಗಿತ್ತು ಎಂದು ಮಾಧ್ಯಮ ವರದಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ