ಧೋನಿ ಮತ್ತು ಸಾಕ್ಷಿ ಧೋನಿ ನಡುವೆ ಲವ್ ಗುರು ಆಗಿದ್ದ ಕ್ರಿಕೆಟಿಗ ಯಾರು ಗೊತ್ತೇ?!
ಶುಕ್ರವಾರ, 23 ನವೆಂಬರ್ 2018 (09:02 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್ ಜತೆಗೆ 2010 ರಲ್ಲಿ ಪ್ರೇಮ ವಿವಾಹವಾಗಿದ್ದರು. ಆದರೆ ಇವರಿಬ್ಬರನ್ನು ಒಂದು ಮಾಡಿದವರು ಯಾರು ಗೊತ್ತೇ?
ಆ ವ್ಯಕ್ತಿ ಯಾರೆಂದು ಸ್ವತಃ ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಅವರು ಬೇರಾರೂ ಅಲ್ಲ, ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ.
2007 ರಲ್ಲಿ ಧೋನಿ ಮೊದಲ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ನಾಯಕತ್ವ ವಹಿಸಿದ್ದಾಗ ರಾಬಿನ್ ಉತ್ತಪ್ಪ ಜತೆಗೆ ಭಾರೀ ಸ್ನೇಹದಿಂದಿದ್ದರು. ಈಗಲೂ ಆ ಸ್ನೇಹ ಮುಂದುವರಿದಿದೆ ಎನ್ನುವುದಕ್ಕೆ ಮೊನ್ನೆ ಸಾಕ್ಷಿ ಧೋನಿ ಬರ್ತ್ ಡೇಯಲ್ಲಿ ರಾಬಿನ್ ಉತ್ತಪ್ಪ ಕಾಣಿಸಿಕೊಂಡಿರುವುದೇ ಸಾಕ್ಷಿ.
ಆ ಬರ್ತ್ ಡೇ ಪಾರ್ಟಿಯ ಫೋಟೋದಲ್ಲಿ ರಾಬಿನ್ ಜತೆಗೆ ಫೋಟೋ ತೆಗೆಸಿಕೊಂಡ ಸಾಕ್ಷಿ ಅದನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ನಾನು ಮಹಿ ಒಂದಾಗಲು ಕಾರಣ ರಾಬಿನ್. ಧನ್ಯವಾದ ರಾಬಿ.. ನಿಮ್ಮನ್ನು ಮತ್ತೆ ಭೇಟಿಯಾಗಿದ್ದು ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವಿನ ಲವ್ ಗುರು ರಾಬಿನ್ ಉತ್ತಪ್ಪ ಎಂದು ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.